BallaryBelagavibidarGadaggulburgakarwar uttar kannadaKoppalStatevijayapur

ಜ.೩೦ , ೩೧ ರಂದು ಕಾಗವಾಡದಲ್ಲಿ ಬೆಳಗಾವಿ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನ


ಬೆಳಗಾವಿ : ಇದೇ ತಿಂಗಳ ೩೦ ಹಾಗೂ ೩೧ ರಂದು ಕಾಗವಾಡದಲ್ಲಿ ಬೆಳಗಾವಿ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ ತಿಳಿಸಿದರು .
ಬೆಳಗಾವಿಯಲ್ಲಿ ಪತ್ರಿಕಾ ಪರಿಷತ್ತಿನಲ್ಲಿಂದು ಮಾತನಾಡಿದ ಅವರು ಮಾಜಿ ರಾಜ್ಯಸಭಾ ಸದಸ್ಯ ,ವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ ಮನು ಬಳಿಗಾರ್ ಉದ್ಘಾಟಿಸಲಿದ್ದಾರೆ .ಉಗಾರ ಖುರ್ದದ ಶ್ರೀಮಲ್ಲಿಕಾರ್ಜುನ ಗುರುದೇವಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ,ಮುರಗೋಡ ಶ್ರೀಮಹಾಂತ ದುರದುಂಡೀಶ್ವರ ಮಠದ ಶ್ರೀ ನೀಲಕಂಠೇಶ್ವರ ಮಹಾಸ್ವಾಮಿಗಳು ,ಹಾಗೂ ಕಾಗವಾಡ ಮಲ್ಲಿಕಾರ್ಜುನ ಗುರುದೇವಾಶ್ರಮದ ಶ್ರೀ ಯತೀಶ್ವರಾನಂದ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದವರು ಹೇಳಿದರು .
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯದ ಕೈಮಗ್ಗ ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ಅವರು ವಹಿಸಲಿದ್ದಾರೆ .ಕರ್ನಾಟಕ ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉಪಸ್ಥಿತರಿರಲಿದ್ದಾರೆ.
ಪುಸ್ತಕ ಮಳಿಗೆ ಹಾಗೂ ಚಿತ್ರಕಲಾ ಪ್ರದರ್ಶನ ಉದ್ಘಾಟನೆಯನ್ನು ಜಿಲ್ಲಾ ಸಚಿವ ರಮೇಶ್ ಜಾರಕಿಹೊಳಿ ನೆರವೆರಿಸಲಿದ್ದಾರೆ ಸಮ್ಮೇಳನ ಸಂಚಿಕೆ ಹಾಗೂ ಗ್ರಂಥಗಳ ಲೋಕಾರ್ಪಣೆಯನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ , ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ ಕುಮಾರ್ ಹೆಗಡೆ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೆರವೇರಿಸಲಿದ್ದಾರೆ .
ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಉತ್ತಮ ಕಾಂಬಳೆ, ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ,ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ‘ಕರ್ನಾಟಕ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ,ಕರ್ನಾಟಕ ಕೊಳಚೆ ನಿರ್ಮೂಲನ ನಿಗಮ ಮಂಡಳಿಯ ಅಧ್ಯಕ್ಷ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ,ಕುಡುಚಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಪಿ ರಾಜೀವ್ ,ರಾಯಬಾಗ ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ದುರ್ಯೋಧನ ಐಹೊಳೆ ,ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ ,ಕಾಗವಾಡ ಶಿರಗುಪ್ಪಿ ಶುಗರ್ಸ್ ಅಧ್ಯಕ್ಷ ಕಲ್ಲಪ್ಪಣ್ಣ ಮಗೆನ್ನವರ ,ಉಗಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದನ್ ಶಿರಗಾಂವ್ಕರ್ ,ಹಿರಿಯ ಸಾಹಿತಿ ಸರಜೂ ಕಾಟ್ಕರ್ ,ಉತ್ತರ ಕರ್ನಾಟಕ ಕನ್ನಡ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಹಿರಿಯ ಪತ್ರಕರ್ತ ಮುರುಗೇಶ ಶಿವಪೂಜಿ ಮತ್ತು ನಿಕಟಪೂರ್ವ ಬೆಳಗಾವಿ ಜಿಲ್ಲಾ ಸಮ್ಮೇಳನಾಧ್ಯಕ್ಷೆ ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಮುಂತಾದವರು ಆಗಮಿಸಲಿದ್ದಾರೆ ಎಂದು ಶ್ರೀಮತಿ ಮಂಗಲಾ ಮೆಟಗುಡ್ಡ ವಿವರಿಸಿದರು .
ಬೆಳಗಾವಿ ಜಿಲ್ಲೆಯ ಶಾಸಕರುಗಳಾದ ಉಮೇಶ್ ಕತ್ತಿ ಸತೀಶ್ ಜಾರಕಿಹೊಳಿ ಮಹಾಂತೇಶ ಕೌಜಲಗಿ ಮಹಾದೇವಪ್ಪ ಯಾದವಾಡ ಮಹಾಂತೇಶ ದೊಡ್ಡಗೌಡರ್ ಶ್ರೀಮತಿ ಲಕ್ಷಿ ಹೆಬ್ಬಾಳ್ಕರ್ ಅನೀಲ ಬೆನಕೆ ಗಣೇಶ್ ಹುಕ್ಕೇರಿ ಅಭಯ ಪಾಟೀಲ ಶ್ರೀಮತಿ ಅಂಜಲಿ ನಿಂಬಾಳ್ಕರ್ ವಿಧಾನ ಪರಿಷತ್ ಸದಸ್ಯರುಗಳಾದ ವಿವೇಕರಾವ್ ಪಾಟೀಲ, ಹಣಮಂತ ನಿರಾಣಿ , ಅರುಣ ಶಹಾಪೂರ ,ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ್ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಪಠಾಣ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾ ಐಹೊಳೆ ,ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಅರುಣ ಕಟಾಂಬಳೆ ಹಾಗೂ ಕಾಗವಾಡ ಜಿಲ್ಲಾ ಪಂಚಾಯತ್ ಸದಸ್ಯ ಅಜೀತ ಚೌಗಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್ ಪಿ ದರ್ಶನ್ ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ವಿದ್ಯಾವತಿ ಭಜಂತ್ರಿ ,ಕಾಗವಾಡದ ವಿದ್ಯಾವರ್ಧಕ ಸಮಿತಿ ಅಧ್ಯಕ್ಷೆ ಜ್ಯೋತಿ ಕುಮಾರ್ ಸಿದಗೌಡ ಪಾಟೀಲ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕಸಾಪ ಅಧ್ಯಕ್ಷ ರುಗಳು ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ ಎಂದು ಅವರು ವಿವರಿಸಿದರು .
ಮುಂಜಾನೆ 8 ಗಂಟೆಗೆ ಸಮ್ಮೇಳನ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು ರಾಷ್ಟ್ರಧ್ವಜವನ್ನು ಕಾಗವಾಡದ ಮಾಜಿ ಯೋಧ ಬಾಳಗೌಡಾ ಬಸಗೌಡ ಪಾಟೀಲ ನೆರವೇರಿಸಲಿದ್ದಾರೆ .ನಾಡ ಧ್ವಜವನ್ನು ಕಾಗವಾಡ ತಹಶೀಲ್ದಾರರಾದ ಪರಿಮಳಾ ದೇಶಪಾಂಡೆ ಅವರು ನೆರವೇರಿಸಲಿದ್ದಾರೆ .ಕಸಾಪದ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ ನೆರವೇರಿಸಲಿದ್ದಾರೆ .
ನಂತರ ಮುಂಜಾನೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಕನ್ನಡ ಮಾತೆ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ.ಕಾಗವಾಡ ತಾಲ್ಲೂಕಾ ಪಂಚಾಯತ ಅಧ್ಯಕ್ಷೆ ಕೃಷ್ಣಾಬಾಯಿ ಬಂಡು ನಂದಾಳೆ ಹಾಗೂ ಉಪಾಧ್ಯಕ್ಷೆ ಶೋಭಾ ಸುಖದೇವ ಬಂಡಗರ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ .ಕಾಗವಾಡ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಎಗನಗೌಡರ್ ಹಾಗೂ ಅಥಣಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ , ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೋಹನಗೌಡ ಪಾಟೀಲ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು .
ಮಧ್ಯಾಹ್ನ 2 ಗಂಟೆಗೆ ಮೊದಲನೇ ಗೋಷ್ಠಿ ” ಗಡಿನಾಡ ಚಿಂತನೆ ” ಆರಂಭವಾಗಲಿದೆ .ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿರುವ ಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಡಾ. ಎಚ್ ಐ ತಿಮ್ಮಾಪುರ ವಹಿಸಲಿದ್ದಾರೆ .ಕನ್ನಡ ಮರಾಠಿ ಭಾಷಾ ಬಾಂಧವ್ಯ ವಿಷಯದ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ ಎ ಜಿ ಘಾಟ್ಗೆ ಉಪನ್ಯಾಸ ನೀಡಲಿದ್ದಾರೆ ,ಗಡಿಭಾಗದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ವಿಷಯದ ಕುರಿತು ಸಾಹಿತಿ ಡಾ ಸಂತೋಷ್ ಹಾನಗಲ್ ಉಪನ್ಯಾಸ ನೀಡಲಿದ್ದಾರೆ .ಹುಕ್ಕೇರಿ ಕಸಾಪ ತಾಲ್ಲೂಕು ಅಧ್ಯಕ್ಷ ಪ್ರಕಾಶ ದೇಶಪಾಂಡೆ ಅವರು ಆಶಯ ನುಡಿಗಳನ್ನಾಡಲಿದ್ದಾರೆ.
ಸಂಜೆ 4ಗಂಟೆಗೆ ಎರಡನೇ ಗೋಷ್ಠಿ ” ಸಮಕಾಲೀನ ಚಿಂತನೆ ” ಆರಂಭವಾಗಲಿದೆ .ಕವಲಗುಡ್ಡ ಹಣಮಾಪೂರದ ಸಿದ್ಧಸಿರಿ ಸಿದ್ಧಾಶ್ರಮದ ಸಿದ್ದಯೋಗಿ ಅಮರೇಶ್ವರ ಮಹಾರಾಜರ ಸಾನ್ನಿಧ್ಯದಲ್ಲಿ ಜರುಗಲಿರುವ ಈ ಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ ಎಸ್ ಎಸ್ ಅಂಗಡಿ ವಹಿಸಲಿದ್ದಾರೆ .ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಾಹಿತ್ಯ ಎಂಬ ವಿಷಯದ ಕುರಿತು ಆರ್.ಪಿ.ಡಿ. ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಚ್ ಬಿ ಕೊಲಕಾರ ಉಪನ್ಯಾಸ ನೀಡಲಿದ್ದಾರೆ .ಸಮಗ್ರ ಕೃಷಿ ಅಭಿವೃದ್ಧಿ ಚಿಂತನೆ ಎಂಬ ವಿಷಯದ ಕುರಿತು ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಅಶೋಕ್ ಪಾಟೀಲ್ ಉಪನ್ಯಾಸ ನೀಡಲಿದ್ದಾರೆ .ಕಾಗವಾಡ ಕಸಾಪ ಕಾರ್ಯಕಾರಿ ಸದಸ್ಯ ಡಾ ದೇವಿಕಾ ನಗರಕರ ಆಶಯ ನುಡಿಗಳನ್ನಾಡಲಿದ್ದಾರೆ .
ಸಂಜೆ 6ಗಂಟೆಗೆ ಮನೋಹರ್ ಕೊಕಟನೂರ ಮತ್ತು ದತ್ತಾತ್ರೇಯ ಜೋಶಿ ಹಾಗೂ ಸಂಗಡಿಗರು ಹಾಗೂ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ .
ಸಮ್ಮೇಳನದ ಎರಡನೇ ದಿನವಾದ ರವಿವಾರ ದಿನಾಂಕ ೩೧ ರಂದು ಮುಂಜಾನೆ 9 ಗಂಟೆಗೆ ೩ ನೇ ಗೋಷ್ಠಿ ” ಕವಿಗೋಷ್ಠಿ ” ಜರುಗಲಿದೆ .ಸದಲಗಾ ಗೀತಾಶ್ರಮದ ಡಾ ಶ್ರದ್ಧಾನಂದ ಸ್ವಾಮೀಜಿ ಯವರ ಸನ್ನಿಧಾನದಲ್ಲಿ ಜರುಗಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯ ಡಾ ಬಾಳಾಸಾಹೇಬ ಲೋಕಾಪೂರ ವಹಿಸಲಿದ್ದಾರೆ .ಕಿತ್ತೂರ ಕಸಾಪ ಅಧ್ಯಕ್ಷ ಡಾ ಸೋಮಶೇಖರ್ ಹಲಸಗಿ ಆಶಯ ನುಡಿಗಳನ್ನಾಡಲಿದ್ದಾರೆ .ಕವಿಗಳಾದ ರಾಘವೇಂದ್ರ ದೇಶಪಾಂಡೆ ಡಾ ಸುರೇಶ ಉಕ್ಕಲಿ ಡಾ ರೇಣುಕಾ ಕಠಾರೆ, ಗುರುಸಿದ್ದಯ್ಯ ಹಿರೇಮಠ್ , ಶ್ರೇಯಾ ದಾನಪ್ಪನವರ್ ನಂದಾ ಕಾಪಶಿ ವಿಠ್ಠಲ ದಳವಾಯಿ ಲಲಿತಾ ಹಿರೇಮಠ ಮಂಜುನಾಥ ಕಳಸಣ್ಣವರ ಆಶಾ ಪರೀಟ್ ಡಿವಿ ಅರಸ ಗೊಂಡ ಚಂದ್ರಶೇಖರ ಕಾರ್ಕಲ,ಬಾಹುಬಲಿ ಲಕ್ಕಣ್ಣವರ ಜ್ಯೋತಿ ಮುರುಗೇಶ್ ಸುನಂದಾ ಪಾಟೀಲ್ ಹಣಮಂತ ನಾಯಿಕ ಇಬ್ರಾಹಿಂ ಬೈರುಗೋಳ ಉಮಾರೂಢ ತಲ್ಲೂರ್ ಶಶಿರೇಖಾ ಬೆಳ್ಳಕ್ಕಿ ಆನಂದ ಏಣಗಿ ವಿಜಯಲಕ್ಷ್ಮಿ ಗೌಡರ ಬಸವರಾಜ ಘೋಡಗೇರಿ ಜ್ಯೋತಿ ಹೊಸೂರ ಶಂಕರ ಗಣಾಚಾರಿ ಎಂ ಎನ್ ಗವಣ್ಣವರ್ ಗುರುಶಾಂತಗೌಡ ಪಾಟೀಲ ಆಶಾ ಬಿಕ್ಕಣ್ಣವರ ಪುಷ್ಪಾ ಮುರುಗೋಡ್ ಬಾಬು ನಾಯ್ಕ್ ಈಶ್ವರಚಂದ್ರ ಬೆಟಗೇರಿ ದೀಪಕ್ ಶಿಂಧೆ ಸರೋಜಾ ಅಮಾತಿ ಮಲ್ಲಿಕಾರ್ಜುನ್ ಕಕಮರಿ ಡಾ ಎಸ್ ಪಿ ತಳವಾರ ದೇವೇಂದ್ರ ಕಮ್ಮಾರ್ ರಾವಸಾಬ್ ಬಡಿಗೇರ್ ಮುಂತಾದವರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ .
ರವಿವಾರ ಹನ್ನೆರಡು ಗಂಟೆಗೆ ನಾಲ್ಕನೇ ಗೋಷ್ಠಿ “ಮಹಿಳಾ ಗೋಷ್ಠಿ ” ನಡೆಯಲಿದೆ .ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಮಹಿಳಾ ಗೋಷ್ಠಿಯ ಅಧ್ಯಕ್ಷತೆಯನ್ನು ಮಾಜಿ ಸಚಿವೆ ಹಾಗೂ ಸಾಹಿತಿ ಶ್ರೀಮತಿ ಲೀಲಾದೇವಿ ಪ್ರಸಾದ್ ವಹಿಸಲಿದ್ದಾರೆ .ಬೈಲಹೊಂಗಲ ತಾಲೂಕಾ ಕಸಾಪ ಅಧ್ಯಕ್ಷೆ ಶ್ರೀಮತಿ ಗೌರಾದೇವಿ ತಾಳಿಕೋಟಿಮಠ ಅವರು ಆಶಯ ನುಡಿಗಳನ್ನಾಡಲಿದ್ದಾರೆ .ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ಎಂಬ ವಿಷಯದ ಕುರಿತು ದೆಹಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯೆ ಶ್ರೀಮತಿ ಪದ್ಮಿನಿ ನಾಗರಾಜು ಉಪನ್ಯಾಸ ನೀಡಲಿದ್ದಾರೆ .ಮಹಿಳೆ ಮತ್ತು ಹೋರಾಟ ಎಂಬ ವಿಷಯದ ಕುರಿತು ಅಥಣಿ ಸಂತರಾಮ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಮತಿ ಭಾರತಿ ಬಿಜಾಪೂರ ಅವರು ಉಪನ್ಯಾಸ ನೀಡಲಿದ್ದಾರೆ .ಆಕಾಶವಾಣಿಯ ಪ್ರಸ್ತುತತೆ ಎಂಬ ವಿಷಯದ ಕುರಿತು ಬೆಂಗಳೂರು ಪ್ರಸಾರ ಭಾರತಿ ದೂರದರ್ಶನ ಕೇಂದ್ರದ ಸಹ ನಿರ್ದೇಶಕಿ ಡಾ ನಿರ್ಮಲಾ ಎಲಿಗಾರ್ ಉಪನ್ಯಾಸ ನೀಡಲಿದ್ದಾರೆ .
ರವಿವಾರ ಮಧ್ಯಾಹ್ನ 2ಗಂಟೆಗೆ ಸಮ್ಮೇಳನ ಅಧ್ಯಕ್ಷರ ಜೀವನ ಸಾಧನೆ ಹಾಗೂ ಸಂವಾದ ಕಾರ್ಯಕ್ರಮ ಜರುಗಲಿದೆ ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಆಶ್ರಮದ ಡಾ ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಸನ್ನಿಧಾನದಲ್ಲಿ ಜರುಗಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಥಣಿಯ ಶಿಕ್ಷಣ ತಜ್ಞ ಹಾಗೂ ಚಿಂತಕ ಅರವಿಂದರಾವ್ ದೇಶಪಾಂಡೆ ವಹಿಸಲಿದ್ದಾರೆ .ಉಗಾರ ಖುರ್ದದ ಉದ್ಯಮಿ ಪ್ರಫುಲ್ ಶಿರಗಾಂವಕರ ಉಪಸ್ಥಿತರಿರಲಿದ್ದಾರೆ .ಹಿರಿಯ ಸಾಹಿತಿ ಶ್ರೀಮತಿ ನೀಲಗಂಗಾ ಚರಂತಿಮಠ ಅವರು ಆಶಯ ನುಡಿಗಳನ್ನಾಡಲಿದ್ದಾರೆ .ಸಮ್ಮೇಳನಾಧ್ಯಕ್ಷರ ಜೀವನ ಹಾಗೂ ಸಾಧನೆ ಕುರಿತು ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ ಎಲ್ ಪಾಟೀಲ್ ಉಪನ್ಯಾಸ ನೀಡಲಿದ್ದಾರೆ .
ಸಮ್ಮೇಳನಾಧ್ಯಕ್ಷ ಡಾ ಪ್ರಭಾಕರ್ ಕೋರೆ ಅವರೊಂದಿಗೆ ಡಾ ದಯಾನಂದ ನೂಲಿ ರಾಜಶೇಖರ ಬಿರಾದಾರ ಆನಂದ ಕುಮಾರ್ ಜಕ್ಕಣ್ಣವರ್ ಶ್ರೀಮತಿ ರತ್ನಪ್ರಭಾ ಬೆಲ್ಲದ ಶ್ರೀಮತಿ ಹೇಮಾವತಿ ಸೊನೊಳ್ಳಿ ಶ್ರೀಮತಿ ಶಾಲಿನಿ ದೊಡ್ಡಮನಿ ಶ್ರೀಮತಿ ಅನ್ನಪೂರ್ಣಾ ಕನೋಜ ಬಾಲಶೇಖರ ಬಂದಿ ಎನ್ ಸಿ ಪುರಾಣಿಕಮಠ ಡಾ ಸಿದ್ದಪ್ಪ ಕಟ್ಟೇಕಾರ ಡಾ ಚಂದ್ರು ತಳವಾರ ಮುಂತಾದವರು ಸಂವಾದ ನಡೆಸಲಿದ್ದಾರೆ .
ರವಿವಾರ ಸಂಜೆ 4ಗಂಟೆಗೆ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಅಥಣಿ ಶ್ರೀ ಶೆಟ್ಟರಮಠದ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಯ ರು ಪಾಟೀಲ ವಹಿಸಲಿದ್ದಾರೆ .ಕಾಗವಾಡದ ಸಾಹಿತಿ ಡಾ ಎಂ ಬಿ ಹೂಗಾರ ಅಥಣಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ .
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಶೋಕ್ ಶೆಟ್ಟರ್ , ಶ್ರೀಮತಿ ಕೆಂಪವ್ವ ಹರಿಜನ ,ರಾಮಣ್ಣ ಬ್ಯಾಟಿ .ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ರಣಜಿತ್ ಸಿಂಗ್ ದಿಶಾಳೆ , ಹಾಗೂ
ಡಾ ಸದಾಶಿವ ಭರಮದೆ (ವೈದ್ಯಕೀಯ ) ಶ್ರೀ ಚನ್ನಪ್ಪ ಮುತ್ನಾಳ (ಕೃಷಿ )ಅಪ್ಪಾಸಾಹೇಬ ದೇಸಾಯಿ ( ರೈತಪರ ಹೋರಾಟಗಾರ) ಚಿದಾನಂದ ಸರೋಡೆ (ಪುಸ್ತಕ ದಾಸೋಹ ) ಬಾಳಪ್ಪ ಚಿನಗುಡಿ ( ಸಂಶೋಧನೆ ) ಗಿರೀಶ್ ಖಡೇದ (ಶಿಕ್ಷಣ )ಅರುಣ ಯಲಗುದ್ರಿ (ತಾಂತ್ರಿಕ ಸೇವೆ ) ನೀಲಪ್ಪ ಗೊರವರ್ (ರಂಗಭೂಮಿ )ಬಸಪ್ಪ ಇಟ್ಟಣ್ಣವರ (ಜಾನಪದ )ಎಸ್ ಎಂ ಚಿಕ್ಕಣ್ಣವರ (ಶಿಕ್ಷಣ ) ವಾಯ್ ಬಿ ಕಡಕೋಳ (ಸಾಹಿತ್ಯ )ಬಸವರಾಜ ಯಳ್ಳೂರ (ಕ್ರೀಡೆ) ಸುನೀಲ್ ಮುತಾಲಿಕ್ (ಶಿಕ್ಷಣ ) ಬಿ ಆರ್ ದೊಡಮನಿ (ಸಮಾಜಸೇವೆ) ವೀರಣ್ಣ ಮಡಿವಾಳರ (ಸಾಹಿತ್ಯ ) ಮಹಾನಂದಾ ಪಾಟೀಲ ಸಂಗೀತ ಜಯಶೀಲಾ ಬ್ಯಾಕೋಡ (ಸಮಾಜಸೇವೆ) ಮಹಾಂತೇಶ ರೇಶ್ಮಿ (ಪತ್ರಿಕಾರಂಗ ) ಡಾ ಜಿ ಪಿ ದೊಡಮನಿ (ಅನುವಾದ ಸಾಹಿತ್ಯ ) ಶ್ರೀಮತಿ ಗಿರಿಜಾ ಸುಳಕುಡೆ (ಪ್ರಕಾಶನ ) ಸಿ ಕೆ ಕೋಳಿವಾಡ್ ಮಠ (ಆಶುಕವಿಗಳು )ಮುಂತಾದವರನ್ನು ಸತ್ಕರಿಸಲಾಗುವದು.
ರವಿವಾರ ಸಂಜೆ 5ಗಂಟೆಗೆ ಬಹಿರಂಗ ಅಧಿವೇಶನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ .ಐನಾಪೂರ ಕೃಷ್ಣಾಕಿತ್ತೂರ ಮಲ್ಲಿಕಾರ್ಜುನ ಗುರುದೇವಾಶ್ರಮದ ಶ್ರೀ ಬಸವೇಶ್ವರ ಮಹಾ ಸ್ವಾಮಿಗಳ ಸನ್ನಿಧಾನದಲ್ಲಿ ಜರುಗಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ ವಹಿಸಲಿದ್ದಾರೆ .ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ ಆಗಿರುವ ಸಮ್ಮೇಳನದ ಸರ್ವಾಧ್ಯಕ್ಷರು ಬಹಿರಂಗ ಸಮ್ಮೇಳನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ .ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮಾಜಿ ಶಾಸಕ ರಾಜು ಕಾಗೆ ಮಾಜಿ ಶಾಸಕ ಮೋಹನ ಶಹಾ ಅಥಣಿ ಸಾಹಿತಿ ಅಶೋಕ ನರೋಡೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಿಕ್ಕೋಡಿಯ ಗಜಾನನ ಮನ್ನಿಕೇರಿ ಮತ್ತು ಬೆಳಗಾವಿಯ ಎ ಬಿ ಪುಂಡಲೀಕ ವಿಶ್ರಾಂತ ಪ್ರಾಚಾರ್ಯ ಕಾಗವಾಡದ ಡಾ ಎಸ್ ಓ ಹಲಸಗಿ ‘,ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಬಿ ಎ ಪಾಟೀಲ್ ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದವರು ವಿವರಿಸಿದರು .
ಬೆಳಗಾವಿಯ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀ ಅಶೋಕ ದುಡಗುಂಟಿ ಅವರು ಬೆಳಗಾವಿ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿದರು.
ಪತ್ರಿಕಾ ಪರಿಷತ್ತಿನಲ್ಲಿ ಕಾಗವಾಡ ತಾಲ್ಲೂಕು ಕಸಾಪ ಅಧ್ಯಕ್ಷ ಸಿದಗೌಡ ಕಾಗೆ ,ಅಥಣಿ ತಾಲ್ಲೂಕು ಕಸಾಪ ಅಧ್ಯಕ್ಷ ಮಹಾಂತೇಶ ಉಕ್ಕಲಿ , ರಾಮದುರ್ಗ ತಾಲೂಕಾ ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ, ಗೋಕಾಕ ತಾಲ್ಲೂಕು ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ ,ಕಿತ್ತೂರು ತಾಲ್ಲೂಕು ಕಸಾಪ ಅಧ್ಯಕ್ಷ ರಾಜ ಶೇಖರ ಹಲಸಗಿ,ಬೈಲಹೊಂಗಲ ತಾಲೂಕ ಕಸಾಪ ಅಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ , ಬೆಳಗಾವಿ ಜಿಲ್ಲಾ ಕಸಾಪದ ಕೋಶಾಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ,ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಬದಾಮಿ ಎಂ ವೈ ಮೆಣಸಿನಕಾಯಿ ಶ್ರೀಮತಿ ಹೇಮಾ ಸೋನೊಳ್ಳಿ , ಶ್ರೀಮತಿ ಶಾಂತಾ ಮಸೂತಿ ಮುಂತಾದವರು ಉಪಸ್ಥಿತರಿದ್ದರು .


Leave a Reply