ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ : ಸಚಿವ ಬೈರತಿ ಬಸವರಾಜ

0

ಕುಷ್ಠಗಿ : ರಾಜ್ಯದಲ್ಲಿ ಬಿಜೆಪಿ ಸರಕಾರ ಉತ್ತಮ ಆಡಳಿತ ನೆಡೆಸುತ್ತಿದ್ದು ಯಡಿಯೂರಪ್ಪನವರು ನಮ್ಮ ನಾಯರಾಗಿದ್ದು ಮುಖ್ಯಮಂತ್ರಿ ಬದಲಾವಣೆ ಅನ್ನುವದು ಅಸಾಧ್ಯವಾಗಿದ್ದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಬಹುಷ್ಯ ಹೇಳುವ ಜ್ಯೋತಿಷ್ಯಗಳೇ ನನಗಂತು ಗೊತ್ತಿಲ್ಲ ಎಂದು ಪೌರಾಡಳಿತ ಸಚಿವ ಬೈರತಿ ಬಸವರಾಜ ಹೇಳಿದರು.ಬೆಂಗಳೂರಿನಿಂದ-ಹೊಸಪೇಟೆ ಮಾರ್ಗವಾಗಿ ಮದ್ಯಾಹ್ನದ ಬೋಜನವನ್ನು ಕುಷ್ಟಗಿ ಸರ್ಕಿಟ್ ಹೌಸ್ ನಲ್ಲಿ ಮುಗಿಸಿ ಲಿಂಗಸೂರು ಮಾರ್ಗವಾಗಿ ತಿಂಥಣಿ ಬ್ರೀಜ್ ಗೆ ಹಾಲುಮತ ಸಂಸ್ಕೃತಿ ವೈಭವದ ಕಾರ್ಯಕ್ರಮಕ್ಕೆ ಹೋಗುವ ಮಾರ್ಗ ಮದ್ಯದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಸಿದ್ರಾಮಯ್ಯ ಮಾಜಿ ಮುಖ್ಯಮಂತ್ರಿ… ಯಡಿಯೂರಪ್ಪನವರು ಮುಖ್ಯಮಂತ್ರಿಯಿಂದ ಬದಲಾವಣೆಯಾಗುತ್ತಾರೆ ಎಂದು ಹೇಳುತ್ತಾರೆ ಆದರೆ ಯಾವ ಮಾನದಂಡದ ಮೇಲೆ ಹೇಳುತ್ತಾರೆ ಗೊತ್ತಿಲ್ಲ ಆದರೆ ಸಿದ್ರಾಮಯ್ಯ ನವರು ಯಾವಾಗ ಜ್ಯೋತಿಶೆಗಳಾದರು ಗೊತ್ತಿಲ್ಲ ಎಂದು ಟೀಕೆ ಮಾಡಿದರು.ಯಾವುದೇ ಕಾರಣಕ್ಕು ಇನ್ನು ಎರಡು ವರ್ಷ ಆರು ತಿಂಗಳು ಯಡಿಯೂರಪ್ಪ ನವರೇ ಮುಖ್ಯಮಂತ್ರಿ ಯಾಗಿರುತ್ತಾರೆ ಯಡಿಯೂರಪ್ಪ ನವರೇ ನಮ್ಮ ನಾಯಕರು. ಬಿಜೆಪಿ ಸರಕಾರ ರಚನೆಯಾಗಲು ೧೭ ಜನ ಶಾಸಕರು ಕಾರಣ ಈಗಾಗಲೇ ನಮ್ಮಲ್ಲಿನ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದ್ದು ಉಳಿದವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪ ನವರು ಉಳಿದ ಶಾಸಕರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ಸಂಪೂರ್ಣ ವಿಸ್ವಾಸ ಇದೇ ಎಂದರು.ಆದರೆ ನನಗೆ ನೀಡಿರುವ ಸಚಿವಸ್ಥಾನ ತೃಪ್ತಿ ತಂದಿದ್ದು ಯಾವುದೇ ಕಾರಣಕ್ಕೆ ನನ್ನ ಖಾತೆ ಬದಲಾವಣೆ ಆಗುವದಿಲ್ಲ ಎಂದು ಹೇಳಿದರು. ಕುರುಬ ಸಮಾಜದ ಪಾದ ಯಾತ್ರೆಗೆ ಸಮಾಜದ ಎಲ್ಲ ಪೂಜ್ಯರ ಜೊತೆ ಮಾತನಾಡಿದ್ದೇನೆ.ಅವರಿಗೆ ನನ್ನ ಸಂಪೂರ್ಣ ಬೆಂಬಲ ಹಾಗೂ ಸಹಕಾರವಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬರಮಗೌಡ ಬ್ಯಾಲಿಹಾಳ, ಚಂದ್ರಕಾಂತ ವಡಗೇರಿ, ಶಂಕರಗೌಡ ಪಾಟೀಲ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

- Advertisement -

- Advertisement -

Leave A Reply

Your email address will not be published.