Ballary

ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ಮತ್ತು ಮಾರಾಟ ಪತ್ರಗಳನ್ನು ಮುದ್ರಿಸಲು ಸರ್ಕಾರೇತರ ಸಂಸ್ಥೆಗಳಿಗೆ ಅರ್ಜಿ ಆಹ್ವಾನ


ಬಳ್ಳಾರಿ/ಹೊಸಪೇಟೆ.ಜ.12 :- ಹೊಸಪೇಟೆಯ ನಗರಸಭೆ ಕಾರ್ಯಾಲಯದಿಂದ ನಗರದ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಹಾಗೂ ಗುರುತಿನ ಚೀಟಿ ಮತ್ತು ಮಾರಾಟ ಪತ್ರಗಳನ್ನು ಮುದ್ರಿಸಲು ಸರ್ಕಾರೇತರ ಸಂಸ್ಥೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪೌರಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಮಾರಾಟಗಾರರ ಡೇಟಾ ಎಂಟ್ರಿ ಮತ್ತು ಭಾವಚಿತ್ರಗಳ ಸ್ಕ್ಯಾನಿಂಗ್ ಮಾಡುವುದು, ಸ್ಮಾರ್ಟ್ ಕಾರ್ಡ್‍ನ ಗುಣಮಟ್ಟ ಪ್ರಮಾಣಿತ ದಪ್ಪವಿರುತ್ತದೆ, ವಿಸಿಐಡಿ ಕಾರ್ಡ್ ಆಗಿದ್ದು (ಮಷೀನ್ಟ್ಸಿಂಟೆಡ್ಮತ್ತು ಜಲ ನಿರೋಧಕ) ಆಗಿರುತ್ತದೆ, ಐ.ಡಿ. ಕಾರ್ಡ್ ಎರಡು ಬದಿ ಹೊಂದಿದ್ದು, ಕಾರ್ಡ್ ಅಗಲ 8.5ಸೆ.ಮೀ. ಮತ್ತು ಉದ್ದ 5.5ಸೆ.ಮೀ, ಕಾರ್ಡ್‍ನ ಹಿಂಭಾಗ, ವ್ಯಾಪಾರಿಯವರ ವಿವರ ಮತ್ತು ಭಾವಚಿತ್ರ, ಕ್ಯೂಆರ್ ಕೋಡ್ ಇರುತ್ತದೆ ಕರ್ನಾಟಕದ ಲೋಗೋ ಮತ್ತು ಸಿ.ಎಂ.ಸಿ.ಯ ಲೋಗೋ ಇರುತ್ತದೆ, ಪ್ರತಿ ಕಾರ್ಡ್ ಯುನಿಕ್ ಕ್ಯೂಆರ್ ಕೋಡ್ ಜನರೇಟ್ ಮಾಡುವುದು, ಹವಾಮಾನ ಪ್ರೂಫ್ಕಾರ್ಡ್, ಹೊಲೊಗ್ರಾಮ್ ಮತ್ತು ವಾಡ್ಕೋ, ಪ್ರತಿ ವ್ಯಾಪಾರಿಗೆ ಜಿಯೋಟ್ಯಾಗಿಂಗ್ ಇರುತ್ತದೆ, ಕಾರ್ಡ್‍ನ ಹಿಂಭಾಗ ವ್ಯಾಪಾರಿಯ ಕುಟುಂಬದ ವಿವರ ಮತ್ತು ಕುಟುಂಬದ ಭಾವಚಿತ್ರ ಅಧಿಕಾರಿಯ ಸಹಿ, ಸೂಚನೆಗಳು ಇರುತ್ತದೆ, ಪ್ರಮಾಣ ಪತ್ರದ ವಿನ್ಯಾಸ, ಮುದ್ರಣ (ಎ4 ಸೈಜ್) ಮತ್ತು ಲ್ಯಾಮಿನೇಶನ್ ಮಾಡುವುದು, ಕಾರ್ಡ್‍ನ್ನು ಲ್ಯಾಮಿನೇಶನ್ ಮಾಡುವುದು(100ಜಿ.ಎಸ್.ಎಮ್.) ಪ್ರತಿ ಕಾರ್ಡ್‍ನಲ್ಲಿ ಕ್ಯೂಆರ್ ಕೋಡ್ ಜನರೇಟ್ ಮಾಡುವುದು, ಹವಾಮಾನ ಪ್ರೂಫ್, ಪ್ರತಿ ವ್ಯಾಪಾರಿಯ ಡೇಟಾ ಎಂಟ್ರಿ ಮಾಡಿಕೊಡುವುದು, ಟ್ಯಾಗ್‍ನ ಎರಡು ಬದಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಗುರುತಿನ ಚೀಟಿ ಮುದ್ರಿಸಿರುತ್ತಾರೆ
ನಿಯಮ ಮತ್ತು ನಿಬಂಧನೆಗಳನ್ನು ಸಲ್ಲಿಸಲು ಆಸಕ್ತ ಸರ್ಕಾರೇತರ ಸಂಸ್ಥೆಗಳು ಮತ್ತು ಮುದ್ರಣಕಾರರು ಜ.21ರ ಸಂಜೆ 5.30ರ ಒಳಗೆ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ನಗರಸಭೆಯ ಡೇ-ನಲ್ಮ್ ವಿಭಾಗವನ್ನು ಸಂಪರ್ಕಿಸಲು ಅವರು ತಿಳಿಸಿದ್ದಾರೆ.


Leave a Reply