Belagavi

ಯರಗಟ್ಟಿ ತಾಲೂಕಾನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ


ಯರಗಟ್ಟಿ ಪಟ್ಟಣವು ಇತ್ತೀಚಿಗೆ ನೂತನ ತಾಲೂಕು ಮಾನ್ಯತೆಯನ್ನು ಪಡೆದ‌ ಬೆನ್ನಲ್ಲೇ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕವು ಅಸ್ತಿತ್ವ ಪಡೆದು ಕ್ರಿಯಾಶೀಲವಾಗಿ ಕನ್ನಡದ ಕೈಕಂಕರ್ಯದಲ್ಲಿ ತೊಡಗಿದೆ.

ಪ್ರಸ್ತುತ ನೂತನ ಯರಗಟ್ಟಿ ತಾಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಿದ್ದು,
ದಿ : ೧೩.೦೧.೨೦೨೧ ರಂದು ಬೆಳಿಗ್ಗೆ ೧೧ಗಂಟೆಗೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯರಗಟ್ಟಿಯಲ್ಲಿ ಮಾನ್ಯ ಅಜಿತ್ ದೇಸಾಯಿ, ಜಿ. ಪಂ. ಸದಸ್ಯರು, ಯರಗಟ್ಟಿ, ಇವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ. ಕಾರಣ ತಾವು ತಪ್ಪದೆ ಭಾಗವಹಿಸಿ, ಸಮ್ಮೇಳನದ ರೂಪುರೇಷೆಗಳ ಕುರಿತು ಉಪಯುಕ್ತ ಸಲಹೆಗಳನ್ನು ನೀಡಬೇಕೆಂದು ವಿನಂತಿಸಲಾಗಿದೆ ಎಂದು ಕಸಪಾ ಅಧ್ಯಕ್ಷರಾದ ರಾಜೇಂದ್ರ ವಾಲಿ ತಿಳಿಸಿದ್ದಾರೆ.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply