vijayapur

ಯುವಜನರು ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಭಾರತ ವಿಶ್ವಗುರುವಾಗಲು ಸಾಧ್ಯ -ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ


ವಿಜಯಪುರ ಜ.೧೨: ಯುವಜನರು, ಮಕ್ಕಳು ವಿವೇಕಾನಂದರAತಹ ಮಹಾ ಪುರುಷರ ತತ್ವ, ಆದರ್ಶಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಾಗ ಭಾರತ ವಿಶ್ವಗುರು ಆಗಲು ಸಾಧ್ಯ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ ಅವರು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿದ್ಯಾವರ್ಧಕ ಸಂಘ, ದರಬಾರ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ದರಬಾರ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ೧೫೮ ನೇ ಜಯಂತಿ ಮತ್ತು ರಾಷ್ಟಿçÃಯ ಯುವ ದಿನಾಚರಣೆ ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರು ನರರ ಸೇವೆಯನ್ನು ಮಾಡುವುದಕ್ಕೆ ಧರೆಗಿಳಿದು ಬಂದ ದೇವರಂತಿದ್ದರು. ಅವರು ತಮ್ಮ ಜೀವನದುದ್ದಕ್ಕೂ ದೀನ, ದಲಿತ, ನೊಂದು ಬೆಂದವರ ಬಾಳನ್ನು ಹಸನಾಗಿಸಲು, ಅದರಲ್ಲೂ ಮಹಿಳೆಯರ ಸಮಾನತೆಗಾಗಿ ಕನಸು ಕಂಡವರು ಅಂತಹ ಮಹಾನ ವ್ಯಕ್ತಿಯ ದಾರಿಯಲ್ಲಿ ಇಂದು ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು.
ಅದರಂತೆ ಯುವಜನರು ದೇಶದ ಕಾನೂನು, ಸಂವಿಧಾನ ಹಾಗೂ ಧ್ಯಾನ, ಪ್ರಾರ್ಥನೆಯಂತಹ ಅಂಶಗಳ ಬಗ್ಗೆಯೂ ಅರಿವು ಮೂಡಿಸಿಕೊಳ್ಳಬೇಕು. ಆ ಮೂಲಕ ದೇಶದ ಅಭಿವೃದ್ಧಿಗೂ ಕೊಡುಗೆ ನೀಡುವಂತಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಾಗೂ ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ಅವರು ವಿಶೇಷ ಉಪನ್ಯಾಸ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಬೇಟಿ ಪಡಾವೋ ಬೇಟಿ ಬಚಾವೋ, ಜಿಲ್ಲಾ ನೋಡಲ್ ಅಧಿಕಾರಿ ನಿರ್ಮಲಾ ದೊಡಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಪ್ರಕಾಶ ಉಡುಪಿಕರ, ಬಿ.ಎನ್ ವಾಲೀಕಾರ, ಡಿ.ವಿ ಚೌಧರಿ ಸೇರಿದಂತೆ ಶಾಲಾ ಮಕ್ಕಳು, ಯುವಕರು, ಇನ್ನೀತರರು ಉಪಸ್ಥಿತರಿದ್ದರು.


Leave a Reply