ಜ.15 ಜನ್ಮದಿನ ಸಾರ್ವಜನಿಕವಾಗಿ ಆಚರಿಸಿಕೊಳ್ಳುವುದಿಲ್ಲ

0

ಕೊರೊನಾ ಸಂಕಷ್ಟ ಮತ್ತು ಕಲ್ಯಾಣ ಕರ್ನಾಟಕದ ಜನತೆ ಅತಿವೃಷ್ಟಿಯಿಂದ ಬಾಧಿತರಾಗಿರುವಾಗ ಈ ಬಾರಿ ಜನೇವರಿ 15ರಂದು ನನ್ನ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ.

BJP  Add

ಪ್ರತಿ ವರ್ಷ ಜನೇವರಿ 15ರಂದು ಭಾಲ್ಕಿ ಕ್ಷೇತ್ರದ ಜನತೆ, ಪಕ್ಷದ ಕಾರ್ಯಕರ್ತರು,ಅಭಿಮಾನಿಗಳು ಮತ್ತು ಹಿತೈಷಿಗಳು ಸೇರಿ ನನ್ನ ಜನ್ಮದಿನ ಆಚರಿಸುತ್ತಿದ್ದಿರಿ ನಿಮ್ಮೆಲ್ಲರ ಪ್ರೀತಿ,ಅಭಿಮಾನಕ್ಕೆ ತಲೆಬಾಗಿ, ನಾನು ಈ ಅದ್ಧೂರಿ ಜನ್ಮದಿನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದೆ, ಆದರೆ ಈ ಬಾರಿ ವಿಶ್ವವೇ ಕೊರೊನಾ ಸಂಕಷ್ಟದಲ್ಲಿರುವಾಗ, ಮತ್ತು ಭಾಲ್ಕಿ ಕ್ಷೇತ್ರದ ಜನತೆಯೂ ಸೇರಿದಂತೆ ಕಲ್ಯಾಣ ಕರ್ನಾಟಕದ ಜನರು ಅತಿವೃಷ್ಟಿಯಿಂದ ಬಾಧಿತವಾಗಿರುವಾಗ ಸಾರ್ವಜನಿಕವಾಗಿ ಸಂಭ್ರಮಿಸುವುದು ಸರಿಯಲ್ಲ ಎಂದು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ.
ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಕ್ಷೇತ್ರದ ಜನರು ಜ.15 ರಂದು ಹಾರ, ತುರಾಯಿ, ಶಾಲು ಇತ್ಯಾದಿಗೆ ಹಣ ವೆಚ್ಚ ಮಾಡದೆ, ತಾವು ಇರುವೆಡೆಯಿಂದಲೇ ಶುಭ ಕೋರುವಂತೆ ಮನವಿ ಮಾಡುತ್ತಿದ್ದೇನೆ ಎಲ್ಲರೂ ಸಹಕರಿಸಿಬೇಕಾಗಿ ವಿನಂತಿ.

- Advertisement -

- Advertisement -

Leave A Reply

Your email address will not be published.