Ballary

ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಅನಿರ್ಧಿಷ್ಠಾವಧಿ ಧರಣಿ ತಾತ್ಕಾಲಿಕವಾಗಿ ಸ್ಥಗಿತ


ಬಳ್ಳಾರಿ, ಜ.೧೩: ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ವತಿಯಿಂದ ಬಳ್ಳಾರಿ ವಿಭಜನೆಯನ್ನು ವಿರೋಧಿಸಿ ಸತತ ಒಂದು ತಿಂಗಳ ಕಾಲ (೩೦) ದಿನಗಳು ನಿರಂತರವಾಗಿ ಹಲವಾರು ಕನ್ನಡಪರ, ರೈತಪರ, ಕಾರ್ಮಿಕ ಪರ, ಪ್ರಗತಿಪರ, ಮಹಿಳಾ, ಹಿರಿಯ ನಾಗರಿಕ, ಅರ್ಚಕರು, ಕಲಾವಿದರು ಹಾಗೂ ವಿವಿಧ ಸಮುದಾಯಗಳ ಸಂಘ-ಸAಸ್ಥೆಗಳ ಪ್ರತಿದಿನ ಬೆಂಬಲವನ್ನು ನೀಡಿ ಬಳ್ಳಾರಿ ಜಿಲ್ಲೆ ವಿಭಜನೆಯನ್ನು ಮಾಡಿ ಮಾಡುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಇಂದಿಗೆ ಒಂದು ತಿಂಗಳು ಕಳೆದಿರುವುದರಿಂದ ಸರ್ಕಾರ ನಮಗೆ ಆಕ್ಷೇಪಣೆ ಸಲ್ಲಿಸಲು ೩೦ ದಿನಗಳ ಕಾಲ ಗಡುವು ನೀಡಿದ್ದು, ಇಂದೀಗ ಇಂದು ಮುಕ್ತಾಯವಾಗುವ ಹಿನ್ನೆಲೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ೫೦ಕ್ಕೂ ಹೆಚ್ಚು ಮುಖಂಡರುಗಳು ಬೆಂಗಳೂರಿಗೆ ತೆರಳಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಆಕ್ಷೇಪಣೆ ಪತ್ರಗಳನ್ನು ಸರ್ಕಾರದ ಅಪಾರ ಕಾರ್ಯದರ್ಶಿಗಳಿಗೆ ಸಲ್ಲಿಸಿ ನಂತರ ಇಂದು ಬೆಂಗಳೂರಿನ ದಿ ಕರ್ನಾಟಕ ಸ್ಟೇಟ್ ಬಿಲಿಯರ್ಡ್ಸ್ ಅಸೋಸಿಯೇಷನ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಂತರ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಿ ತಮ್ಮ ಗಮನಕ್ಕೆ ತರಲಾಗುವುದು.
ಅನಿರ್ದಿಷ್ಟಾವಧಿ ಧರಣಿಗೆ ನಿರಂತರವಾಗಿ ಬೆನ್ನೆಲುಬಾಗಿ ನಿಂತಿರುವ ಪತ್ರಿಕಾ ಮಾಧ್ಯಮ ಸಂಪಾದಕರು, ವರದಿಗಾರರಿಗೂ, ಪೊಲೀಸ್ ಸಿಬ್ಬಂದಿಗೂ ಹೋರಾಟ ಸಮಿತಿಯ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ನಾಸೀರ್ ಹುಸೇನ್, ಮಾಜಿ ಸಂಸದ ಉಗ್ರಪ್ಪ, ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯಮಂತ್ರಿ ಚಂದ್ರು, ಎಲ್.ಹನುಮಂತಯ್ಯ, ಮುಂಡ್ರಿಗಿ ನಾಗರಾಜ್, ಮಾನಯ್ಯ, ಟಿ.ಜಿ.ವಿಠಲ್, ಚಾಗನೂರು ಸಿರಿವಾರ ಭೂ ರಕ್ಷಣಾ ಹೋರಾಟ ಸಮಿತಿಯ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಹುಮಾಯೂನ್ ಖಾನ್, ಕಣೇಕಲ್ ಮಾಬುಸಾಬ್, ಮಾಧವರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.


Leave a Reply