hallur

ಹಕ್ಕಿಜ್ವರ ನಿಯಂತ್ರಣ ಕ್ರಮಗಳ ಪರಿಶೀಲನೆ

0

ವಿಜಯಪುರ ಜ.೧೩: ಜಿಲ್ಲೆಯ ಕೆರೆ ಹಾಗೂ ಕೊಂಬೆಗಳು ಮತ್ತು ಅರಣ್ಯ ಪ್ರದೇಶಗಳ ಸುತ್ತಮುತ್ತ ವಲಸೆ ಪಕ್ಷಿಗಳು ಮತ್ತು ಇತರೆ ಪಕ್ಷಿಗಳಲ್ಲಿ ಅಸ್ವಾಭಾವಿಕ ಮರಣ ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿAದು ಜಿಲ್ಲಾ ಪ್ರಾಣಿಜನ್ಯ ನಿರ್ವಹಣಾ ಸಮಿತಿ ಹಾಗೂ ಹಕ್ಕಿಜ್ವರ ಕುರಿತು ಸಭೆ ನಡೆಸಿದ ಅವರು ಕೇರಳ ಹಾಗೂ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಹಕ್ಕಿಜ್ವರ ಕಂಡುಬAದಿದೆ. ಈ ಹಿನ್ನೆಲೆಯಲ್ಲಿ ಬೇರೆ ರಾಜ್ಯದಿಂದ ಬರುವ ಕೋಳಿ ಮತ್ತು ಮೊಟ್ಟೆಯ ಮೇಲೆ ಸೂಕ್ತ ನಿಗಾ ಇರಿಸಬೇಕು. ವಲಸೆ ಬರುವ ಪಕ್ಷಿಗಳ ಎಲ್ಲ ಕೆರೆ ಮತ್ತು ನೀರಿನ ಸಂಗ್ರಾಹಲಯಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೃತಪಟ್ಟಿರುವ ಪಕ್ಷಿಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯ ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಪ್ರಾರಂಭಿಸಲಾಗಿದ್ದು ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಂಡುಬAದ ಬಗ್ಗೆ ದೃಢೀಕೃತ ವರದಿ ನಂತರ ಶಿರಾಡೊಣ, ಸಿದ್ದಾಪೂರ ಮತ್ತು ಕನ್‌ಮಡಿ ಚೆಕ್‌ಪೋಸ್ಟ್ ಪ್ರಾರಂಭಿಸಿದ್ದು ಒಟ್ಟು ೪ ಚೆಕ್‌ಪೋಸ್ಟ್ಗಗಳನ್ನು ಸ್ಥಾಪಿಸಿ ತೀವ್ರ ನೀಗಾ ಇಡಲಾಗಿದೆ. ಚೆಕ್‌ಪೋಸ್ಟಗಳನ್ನು ಗ್ರಾಮ ಪಂಚಾಯತಿ, ಆರ್.ಟಿ.ಒ ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪಶುಸಂಗೋಪನಾ ಇಲಾಖೆಯ ಅವರಿಗೆ ಸಹಕಾರ ಸಹ ನೀಡುವಂತೆ ಅವರು ಸೂಚನೆ ನೀಡಿದ್ದಾರೆ.
ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಉಪಯೋಗಿಸುತ್ತಿರುವ ವಾಹನಗಳನ್ನು ಚೆಕ್‌ಪೋಸ್ಟ್ಗಳಲ್ಲಿ ಗುರುತಿಸಿ ಅವಶ್ಯಕ ಸ್ಯಾನಿಟೈಸರ್ ಮಾಡಲು ಸ್ಥಳಿಯ ಸಂಸ್ಥೆಗಳ ಮತ್ತು ಇತರೆ ಇಲಾಖೆಗಳ ಸಹಕಾರ, ಸಮನ್ವಯತೆ ಮತ್ತು ಸಹಯೋಗದೊಂದಿಗೆ ಕಾರ್ಯನಿರ್ವಹಿಸುವಂತೆ ತಿಳಿಸಿದ ಅವರು ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಕೋಳಿಗಳು ಮೃತಪಟ್ಟರೆ ಸೂಕ್ತ ನೀಗಾ ಸಹ ಇಡುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯ ಗಡಿಭಾಗದಲ್ಲಿ ಪಶು ವೈದ್ಯಾಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿದ್ದು ಬೇರೆ ರಾಜ್ಯಗಳಿಂದ ಬರುವ ಕೋಳಿ ಮತ್ತು ಮೊಟ್ಟೆಯ ಮೇಲೆ ತೀವ್ರ ನಿಗಾ ಇಡಬೇಕು ಎಂದು ತಿಳಿಸಿದ ಅವರು ಪ್ರತಿವಾರ ಪ್ರತಿ ತಾಲ್ಲೂಕಿನಿಂದ ಹಕ್ಕಿಜ್ವರ ಸರ್ವೇಕ್ಷಣ ಜೊತೆಗೆ ಕೋಳಿಗಳ ಕ್ಲೋಯಿಕಲ್ ಸ್ಯಾಂಪಲ್ ಟ್ರೇಕಿಯಲ್ ಮಾದರಿಗಳನ್ನು ಸೇರಂ ಲ್ಯಾಬ್‌ಗೆ ಪರೀಕ್ಷೆಗಾಗಿ ಕಳುಹಿಸಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಪಶುಸಂಗೋಪನಾ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಶ್ರೀ. ಪ್ರಾಣೇಶ್ ಜಾಹಗಿರ್‌ದಾರ್ ಅವರು ಕೋಳಿ ಮೌಂಸ ಮತ್ತು ಮೊಟ್ಟೆಗಳನ್ನು ಬೇಯಿಸಿ ಆಹಾರ ಖಾದ್ಯ ಪದಾರ್ಥಗಳನ್ನು ಬೇಯಿಸಿ ತಿನ್ನುವುದರಿಂದ ರೋಗ ಮನುಷ್ಯರಲ್ಲಿ ಹರಡುವ ಸಂಭವನೀಯತೆ ಇರುವುದಿಲ್ಲ. ಜಿಲ್ಲೆಯಲ್ಲಿ ನಿಯಮಿತವಾಗಿ ಹಕ್ಕಿಜ್ವರ ಪ್ರತಿತಿಂಗಳು ಸರ್ವೇಕ್ಷಣ ಕಾರ್ಯ ಜಾರಿಯಲ್ಲಿದೆ. ವಾತಾವರಣದಿಂದ (ಕೋಳಿ ಹಿಕ್ಕಿಯಿಂದ, ಕೋಳಿ ಆಹಾರ, ರೆಕ್ಕೆಪುಕ್ಕಗಳು,) ಕೋಳಿಗಳ ಕ್ಲೋಯಿಕಲ್ ಸ್ಯಾಂಪಲ್ ಟ್ರೆಕಿಯಲ್ ಮಾದರಿಗಳನ್ನು ಸೇರಂ ಮಾದರಿಗಳನ್ನು ಪ್ರತಿ ತಿಂಗಳು ಪ್ರಾಣಿ ಆರೋಗ್ಯ ಜೈವಿಕ ಸಂಸ್ಥೆ ಬೆಂಗಳೂರು, ಈ ಲ್ಯಾಬಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪ್ರತಿ ತಾಲ್ಲೂಕಿನಿಂದ ವಾರಕ್ಕೆ ೫ ಮಾದರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ಹಕ್ಕಿಜ್ವರವು ಇನ್‌ಫ್ಲುಯೆಂಜಾ ವೈರಸ್‌ನಿಂದ ಹರಡುವ ರೋಗವಾಗಿದೆ. ರೋಗಗ್ರಸ್ತ ಕೋಳಿಗಳಿಂದ ಈ ರೋಗವು ಬೇರೆ ಕೋಳಿಗಳಿಗೆ ಹರಡುತ್ತದೆ. ಹಕ್ಕಿಜ್ವರ ಕೇರಳ ರಾಜ್ಯದಲ್ಲಿ ಪ್ರಾರಂಭವಾಗಿ ಪಕ್ಕ ಮಹಾರಾಷ್ಟ್ರ ಸೇರಿದಂತೆ ೧೦ ರಾಜ್ಯಗಳಲ್ಲಿ ಕಂಡುಬAದಿದ್ದು ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಖಖಖಿ ( ರ‍್ಯಾಪಿಡ್ ರೆಸ್ಪಾನ್ಸ್ ಟೀಮ್) ಕ್ಷೀಪ್ರ ಕಾರ್ಯಾಚರಣೆ ಪಡೆ ಸನ್ನದ್ದುಗೊಳಿಸಿ ತರಬೇತಿ ನೀಡಲಾಗಿದೆ. ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಎಲ್ಲಾ ಸಹಾಯಕ ನಿರ್ದೇಶಕರಿಗೆ, ಅಧಿಕಾರಿಗಳಿಗೆ ತಾಂತ್ರಿಕ ಮಾಹಿತಿ ನೀಡಿದೆ. ಕ್ಷೇತ್ರ ಮಟ್ಟದ ಎಲ್ಲ ಅಧಿಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಿ ತಾಂತ್ರಿಕ ಮಾಹಿತಿ ಸಹ ನೀಡಲಾಗಿದೆ ಎಂದು ಹೇಳಿದರು. ಅದರಂತೆ ಜಿಲ್ಲೆಯಲ್ಲಿ ಒಟ್ಟು ೫೩ ಬಾಯಿಲರ್ ಕೋಳಿ ಫಾರ್ಮಗಳಿದ್ದು ಒಂದು ಮೊಟ್ಟೆ ಕೋಳಿ ಫಾರ್ಮ್ ಇದೆ, ೨೦ ಹಿತ್ತಲ ಕೋಳಿ ಸಾಕಿದ ಕುಟುಂಬಗಳ ಸಂಖ್ಯೆ ಇದೆ, ಇಲಾಖೆಯ ಕ್ಷೇತ್ರ ಸಿಬ್ಬಂದಿಗಳಿಗೆ ಪ್ರತಿದಿನ ಕೋಳಿ ಫಾರ್ಮ ಗೆ ಭೇಟಿ ನೀಡಿ ಜೈವಿಕ ಸುರಕ್ಷತೆ ಬಗ್ಗೆ ಮಾಹಿತಿ ನೀಡುವ ಜೊತೆಗೆ ಕೋಳಿಗಳ, ಪಕ್ಷಿಗಳ ಮರಣ ಸಂಭವಿಸಿದಲ್ಲಿ ವರದಿ ನೀಡಲು ಸಹ ಸೂಚಿಸಿದೆ.ತಜ್ಞ ಪಶುವೈದ್ಯರನ್ನು ನಿಯೋಜಿಸಿದ್ದು ಒಂದೇ ಒಂದು ಹಕ್ಕಿಜ್ವರದ ಪ್ರಕರಣಗಳು ಕಂಡುಬAದಲ್ಲಿ ಆ ಪ್ರದೇಶ ಕ್ವಾರನ್ ಟೈನ್ ಮಾದರಿಯಲ್ಲಿ ನಿಗಾ ಇಡಲು ಸೂಚಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀ. ಲಕ್ಷ್ಮಿಕಾಂತ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀ. ಹರ್ಷಾ ಶೇಟ್ಟಿ, ಸೇರಿದಂತೆ ಪಶು ಸಂಗೋಪನಾ, ಅರಣ್ಯ ಇಲಾಖೆ ಅಧಿಕಾರಿಗಳು ಪಶುವೈದ್ಯರು ಉಪಸ್ಥಿತರಿದ್ದರು.

- Advertisement -

- Advertisement -

Leave A Reply

Your email address will not be published.