Belagavi

ಭಾಗ್ಯಲಕ್ಷಿö್ಮÃ ಬಾಂಡ ವಿತರಣಾ ಕಾರ್ಯಕ್ರಮ


ಬೈಲಹೊಂಗಲ ೧೩: ತಾಲೂಕಿನ ಮುರಕಿಬಾವಿ ಗ್ರಾಮದ ಶ್ರೀ ಸಿದ್ದಾರೋಡ ಮಠದಲ್ಲಿ ಪರಮಪೂಜ್ಯ, ಶ್ರೀ ಶಿವಾನಂದ ಭಾರತಿ ಸ್ವಾಮಿಜಿ ಇಂಚಲ ಸಾನಿದ್ಯದಲ್ಲಿ ಕಿತ್ತೂರ ಮತಕ್ಷೇತ್ರದ ಭಾಗ್ಯಲಕ್ಷಿö್ಮÃ ಬಾಂಡ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಮಹಾಂತೇಶ ದೊಡಗೌಡರ, ಜಿ. ಪಂ. ಸದಸ್ಯೆ ಲಾವಣ್ಯಾ ಶ್ಯಾಮಸುಂದರ ಶಿಲ್ಲೇದಾರ, ಮಹಾಂತೇಶ ಭಜಂತ್ರಿ ಶಿಶು ಅಭಿವೃಧ್ಧಿ ಯೋಜನಾಧಿಕಾರಿ, ಗ್ರಾ. ಪಂ. ಸದಸ್ಯರಾದ ಶಿವಾನಂದ ಪಾಟೀಲ, ಅಡಿವೆಪ್ಪ ಮೋದಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಸಕ ಮಹಾಂತೇಶ ದೊಡಗೌಡರ ಫಲಾನುಭವಿಗಳಿಗೆ ಬಾಂಡ್ ವಿತರಿಸಿ ಮಾತನಾಡಿ ಭಾಗ್ಯಲಕ್ಷಿö್ಮÃ ಯೋಜನೆಯು ಹೆಣ್ಣು ಗಂಡಿನ ಅಂತರವನ್ನು ಹೋಗಲಾಡಿಸಲು ಘನ ಸರಕಾರವು ನೀಡಿದ ಬಾಂಡಗಳ ಸದುಪಯೋಗವನ್ನು ಎಲ್ಲ ಫಲಾನುಭವಿಗಳು ಪಡೆಯ ಬೇಕೆಂದು ತಿಳಿಸಿದರು.
ಮಹಾಂತೇಶ ಭಜಂತ್ರಿ ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳು ಭಾಗ್ಯಲಕ್ಷಿö್ಮÃ ಯೋಜನೆಯು ೨೦೦೬-೦೭ರಲ್ಲಿ ಜಾರಿಗೆ ಬಂದಿದ್ದು, ಲಿಂಗಾನುಪಾತ ಕಾಪಾಡುವ ಸಲುವಾಗಿ, ಹೆಣ್ಣು ಬ್ರೂಣ ಹತ್ತೆ , ಬಾಲ್ಯ ವಿವಾಹವನ್ನು ತಡೆಯುವ ಸಲುವಾಗಿ ಈ ಯೊಜನೆಯು ಪೂರಕವಾಗಿದೆ. ಈ ಯೋಜನೆಯು ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕೆ ಒಂದು ವರದಾನ. ಕುಟುಂಬದಿAದ ಮೊದಲ್ಗೊಂಡು ಸಮಾಜದಲ್ಲಿ ಹೆಣ್ಣು ಮಗುವಿನ ವಿರುದ್ದದ ದೋರಣೆಯನ್ನು ಬದಲಿಸಲು ಉತ್ತಮ ಕಾರ್ಯಕ್ರಮವಾಗಿರುತ್ತದೆ. ಹೆಣ್ಣು ಮಗುವಿನ ಸ್ಥಾನಮಾನಕ್ಕೆ ಹೆಚ್ಚಿನ ಮೌಲ್ಯ ಕಲ್ಪಿಸುವ ಉದ್ದೇಶದಿಂದ ಹೆಣ್ಣು ಮಕ್ಕಳ ಆರೋಗ್ಯ ಶಿಕ್ಷಣ, ಪೋಷಣೆ ಹಾಗೂ ಸರ್ವಾಂಗೀಣ ಅಭಿವೃದ್ದಿಗೆ ಉತ್ತೇಜಿಸುವ ಈ ಯೋಜನೆ ಹೆಣ್ಣು ಮಗುವಿನ ರಕ್ಷಣೆಗೆ ಪೂರಕವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ವಲಯ ಮೇಲ್ವಿಚಾರಕಿ ಗೀತಾ ಸುರಕೋಡ ವಂದಿಸಿದರು.

 


Leave a Reply