Koppal

ಮನಸ್ಸು ಮಾಡಿದರೆ ಮಾನಸಿಕವಾಗಿ ಹೊರ ಬರಬಲ್ಲ- ಡಾ!! ಸವಡಿ


ಗಂಗಾವತಿ ; ಗಂಗಾವತಿ ಸರ್ಕಾರಿ ಉಪ ವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಮಾನಸಿಕ ಕಾಯಿಲೆಗಳನ್ನು ತಡೆಗಟ್ಟುವ ಕಾರ್ಯಕ್ರಮವನ್ನು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಈಶ್ವರ ಸವಡಿ ಅವರು ಉದ್ಘಾಟಿಸಿದ್ದರು ಆದರೆ ಇಂದು. ಸಮಾರೋಪ ಸಮಾರಂಭ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಳಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಈಶ್ವರ ಸವಡಿ ಯವರನ್ನು ಸನ್ಮಾನಿಸಲಾಯಿತು
ನಂತರ ಮಾತನಾಡಿದ ತಾಲೂಕ ವೈದ್ಯಾಧಿಕಾರಿ ಈಶ್ವರ ಸವಡಿ ಅವರು ಮಾನಸಿಕ ಕಾಯಿಲೆಯನ್ನು ತಡೆಗಟ್ಟಬೇಕಾದರೆ ಮುಖ್ಯವಾಗಿ ಮಾನಸಿಕ ಮನುಷ್ಯನಿಗೆ ಒತ್ತಡ ಇರಬಾರದು, ಒತ್ತಡ ಹೆಚ್ಚಾದಂತೆಲ್ಲ ದೇಹದಲ್ಲಿ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಮನುಷ್ಯ ಮನಸ್ಸು ಮಾಡಿದರೆ, ಮಾನಸಿಕವಾಗಿ ಹೊರ ಬರಬಲ್ಲ ಎಂದು ತಿಳಿಸಿದರು.

ಮನುಷ್ಯ ಯಾವುದೇ ಕೆಲಸವನ್ನು ಮಾಡುವಾಗ ತಮ್ಮ ಇಚ್ಛಾಶಕ್ತಿ ಕೊರತೆಯಾಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ಯಾವುದೇ ರೀತಿಯಲ್ಲಿ ಮನುಷ್ಯನಿಗೆ ಭಯ ಮತ್ತು ಹೆದರಿಕೆ ಇರುವುದಿಲ್ಲ, ಆದ ಕಾರಣ ತಮ್ಮ ತಮ್ಮ ಮನಸ್ಸನ್ನು ಒಳ್ಳೆಯ ಕೆಲಸಗಳಿಗೆ ಗಮನವನ್ನು ನೀಡಬೇಕು ಎಂದು ಸಲಹೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾನಸಿಕ ತಜ್ಞಯರಾದ ವಾದಿರಾಜ, ಗ್ರಹ ರಕ್ಷಕರಾದ ಮಹಮ್ಮದ್ ಖಾನ್, ಆಸ್ಪತ್ರೆ ಸಿಬ್ಬಂದಿಗಳಾದ ಯಮನೂರಪ್ಪ ಭಜಂತ್ರಿ, ಶಿವಾನಂದ, ಕೆ.ಆರ್.ರಾಜು ಸೇರಿದಂತೆ ಇತರರು ಇದ್ದರು.


Leave a Reply