Koppal

ಕುಕನೂರು : ಆಫ್‌ಲೈನ್ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ ಜ.೧೩ : ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಮೆರಿಟ್ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳನ್ನು ೨ನೇ ಆಕಸ್ಮಿಕ ಸುತ್ತಿನಲ್ಲಿ ಭರ್ತಿ ಮಾಡಿಕೊಳ್ಳಲು ಆಫ್‌ಲೈನ್ ಮೂಲಕ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.
ಸಂಸ್ಥೆಯಲ್ಲಿ ಇ.ಎಂ. ವೃತ್ತಿಯಲ್ಲಿ-೧೦, ಫಿಟ್ಟರ್-೦೨, ಮಷಿನಿಸ್ಟ್-೧೩, ಎಂ.ಎA.ವಿ-೧೦, ಟರ್ನರ್-೧೦, ಶಿಟ್ ಮೆಟಲ್ ವರ್ಕರ್-೨೦, ವೆಲ್ಡರ್-೨೬ ಮತ್ತು ಕೋಪಾ-೧೪ ಸ್ಥಾನಗಳು ಖಾಲಿ ಇದ್ದು, ಆಸಕ್ತ ಹತ್ತನೇ ತರಗತಿ ಉತ್ತೀರ್ಣ ಹಾಗೂ ಅನುತ್ತೀರ್ಣ ಅಭ್ಯರ್ಥಿಗಳು ಜನವರಿ.೧೬ ರೊಳಗೆ ಸಂಸ್ಥೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply