ಈಕರಸಾ ಸಂಸ್ಥೆಯಿAದ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್‌ಗಳ ವಿತರಣೆ

ವಿಜಯಪುರ ಜ.೧೩: ಸರ್ಕಾರದ ನಿರ್ದೇಶನದಂತೆ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈಗಾಗಲೇ ಈಕರಸಾ ಸಂಸ್ಥೆ ವಿಜಯಪುರ ವಿಭಾಗದ ಈ ಕೆಳಗಿನ ಬಸ್ ನಿಲ್ದಾಣಗಳಲ್ಲಿ ಪಿಯುಸಿ, ಪದವಿ, ಸ್ನಾತಕೋತ್ತರ, ಡಿಪ್ಲೋಮಾ, ತಾಂತ್ರಿಕ, ವೈದ್ಯಕೀಯ, ಆಯ್ ಟಿ ಆಯ್ ಕಾಲೇಜು ವಿದ್ಯಾರ್ಥಿ ರಿಯಾಯಿತಿ ಪಾಸ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ವಿಜಯಪುರ, ಈಕರಸಾ ಸಂಸ್ಥೆ, ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ವಿಜಯಪುರ, ಕೇಂದ್ರ ಬಸ್ ನಿಲ್ದಾಣ, ಇಂಡಿ ಬಸ್ ನಿಲ್ದಾಣ, ಝಳಕಿ ಬಸ್ ನಿಲ್ದಾಣ, ಚಡಚಣ ಬಸ್ ನಿಲ್ದಾಣ, ಸಿಂದಗಿ ಬಸ್ ನಿಲ್ದಾಣ, ದೇ.ಹಿಪ್ಪರಗಿ ಬಸ್ ನಿಲ್ದಾಣ, ಆಲಮೇಲ ಬಸ್ ನಿಲ್ದಾಣ, ಮುದ್ದೇಬಿಹಾಳ ಬಸ್ ನಿಲ್ದಾಣ, ನಿಡಗುಂದಿ ಬಸ್ ನಿಲ್ದಾಣ, ತಾಳಿಕೋಟಿ ಬಸ್ ನಿಲ್ದಾಣ, ಬ.ಬಾಗೇವಾಡಿ ಬಸ್ ನಿಲ್ದಾಣ, ಮನಗೂಳಿ ಬಸ್ ನಿಲ್ದಾಣ, ಹೂ.ಹಿಪ್ಪರಗಿ ಬಸ್ ನಿಲ್ದಾಣಗಳಲ್ಲಿ ಪಾಸ್‌ಗಳನ್ನು ವಿತರಿಸಲಾಗುತ್ತದೆ.
ವಿದ್ಯಾರ್ಥಿ ರಿಯಾಯಿತಿ ಪಾಸ್ ಪಡೆಯಲು ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಯ ಒಂದು ಪ್ರತಿಯನ್ನು ತೆಗೆದುಕೊಂಡು ಅದಕ್ಕೆ ಪಾಲಕರ ಹಾಗೂ ವಿದ್ಯಾ ಸಂಸ್ಥೆಯ ಮುಖ್ಯಸ್ಥರ ರುಜುವಿನೊಂದಿಗೆ ತಮ್ಮ ವ್ಯಾಪ್ತಿಯ ಪಾಸ್ ವಿತರಣಾ ಕೇಂದ್ರದಲ್ಲಿ ಸಲ್ಲಿಸಿ, ಪಾಸಿನ ಮೊತ್ತವನ್ನು ಭರಣಾ ಮಾಡಿ, ಪಾಸ್ ಪಡೆದುಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.