ಅನುಕಂಪದ ಆಧಾರದ ಮೇಲೆ ಆಯ್ಕೆಗೊಂಡ ೭ ಜನರಿಗೆ ಆದೇಶಪತ್ರ ವಿತರಣೆ

ಬೆಳಗಾವಿ, ಜ. ೧೩ : ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಗೊಂಡ ೭ ಜನರಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಬುಧವಾರ(ಜ.೧೩) ನೇಮಕಾತಿ ಆದೇಶಪತ್ರವನ್ನು ನೀಡಿದರು.
ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಏಳು ಜನರಿಗೆ ಅವರ ವಿದ್ಯಾರ್ಹತೆ ಆಧರಿಸಿ ಗ್ರೂಪ್ ’ಸಿ’ ಹಾಗೂ ಗ್ರುಪ್ ’ಡಿ’ ಹುದ್ದೆಗಳಿಗೆ ನಿಯೋಜಿಸಿ ಆದೇಶಪತ್ರವನ್ನು ನೀಡಲಾಯಿತು.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಎಲ್ಲ ಏಳು ಜನರು ನೇಮಕಾತಿ ಪತ್ರವನ್ನು ಸ್ವೀಕರಿಸಿದರು.
ಪ್ರಿತಮ ಪ್ರಕಾಶ ಪಟ್ಟಣ, ಮಹಾನಗರ ಪಾಲಿಕೆ ಬೆಳಗಾವಿ ಕರವಸೂಲಿ ಸಹಾಯಕ; ಸುಶಾಂತ ಪಿ. ಹೂವನ್ನವರ ಮಹಾನಗರ ಪಾಲಿಕೆ ಬೆಳಗಾವಿ ಕರವಸೂಲಿ ಸಹಾಯಕ (ಗ್ರೂಪ್ ಸಿ); ಗಣೇಶ್ ಅರ್ಜುನ್ ಕೋರಡೆ ಮಹಾನಗರ ಪಾಲಿಕೆ ಬೆಳಗಾವಿ ಕಾವಲುಗಾರ (ಗ್ರೂಪ್ ಡಿ); ಮಾಲನ ಪಾಂಡುರAಗ ಕಾಂಬಳೆ ನಗರಸಭೆ ನಿಪ್ಪಾಣಿ ಪೌರಕಾರ್ಮಿಕ (ಗ್ರೂಪ್ ಡಿ); ಆನಂದ್ ಕಾಡಪ್ಪ ಭೋಸಲೆ ಪುರಸಭೆ ಸಂಕೇಶ್ವರ ಲೋಡರ್ (ಗ್ರೂಪ್ ಡಿ), ಸುಶೀಲಾ ಬಿ ಬಂಗಾರಿ ಪುರಸಭೆಯಲ್ಲಿ ಸಿಪಾಯಿ (ಗ್ರೂಪ್ ಡಿ); ಗೌರವ್ವ ಅಪ್ಪಾಸಾಹೇಬ್ ಝನಕೆ ಪುರಸಭೆ ಹುಕ್ಕೇರಿ ಪೌರಕಾರ್ಮಿಕ (ಗ್ರೂಪ್ ಡಿ) ಯಲ್ಲಿ ನೇಮಕ ಹೊಂದಿರುತ್ತಾರೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವಿಜಯಕುಮಾರ್ ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.