hallur

ವಿವೇಕಾನಂದ ಯುಥ್ ಐಕಾನ್: ಶ್ರೀ ಬಸವರಾಜ ಸ್ವಾಮಿಗಳು

0

ಕಲ್ಲೋಳಿ: ಹಿಂದು ಧರ್ಮದ ಪುನರುಜ್ಜೀವನಕ್ಕೆ ಕಾರಣೀಭೂತರಾದ ವಿವೇವೇಕಾನಂದರು ರಾಷ್ಟಿçÃಯತೆಗೆ ನೀಡಿದ ಕೊಡುಗೆ ಅಪಾರವಾದದ್ದು. ಸನ್ಯಾಸ ಧರ್ಮದ ವ್ಯಾಪ್ತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸಿದ ವಿವೇಕಾನಂದರು, ಧರ್ಮಪಾಲನೆ ಎಂದರೆ ಏಕಾಂತದದಲ್ಲಿ ಕುಳಿತು ಮಾಡುವ ತಪಸ್ಸಲ್ಲ: ಜನರ ನಡುವೆ ಇದ್ದುಕೊಂಡು ಜನರಿಗಾಗಿ ಸಮಸ್ತ ಶಕ್ತಿಯನ್ನು ವಿನಿಯೋಗಿಸುವುದು ಎಂದು ಸಾರಿದ್ದಾರೆ. ಈ ಸಮಾಜಯಜ್ಞಕ್ಕೆ ಅವರು ವಿಸೇಷ ಆಹ್ವಾನ ನೀಡಿದ್ದು ಯುವಕರಿಗೆ ಎಂದು ಕಪರಟ್ಟಿ-ಕಳ್ಳಿಗುದ್ದಿ ಶ್ರೀ ಮಠದ ಪೂಜ್ಯರಾದ ಶ್ರೀ ಬಸವರಾಜ ಹಿರೇಮಠ ಶ್ರೀಗಳು ನುಡಿದರು.
ಮಂಗಳವಾರ ಕಲ್ಲೋಳಿಯ ಶ್ರೀ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್ ಹಾಗೂ ಯುಥ್ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್.ಇ.ಸಂಸ್ಥೆಯ ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ ಮಾತನಾಡಿ, ಯುವಜನತೆ ವಿವೇಕಾನಂದರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಎಂ.ಬಿ.ಕುಲಮೂರ, ಕೆ.ಎಸ್.ಪರವ್ವಗೋಳ, ಎಸ್.ಎಂ.ಐಹೊಳೆ, ಸಿ.ಆರ್.ಲಕ್ಷೇಟ್ಟಿ, ಗಣೇಶ ನಾಯಿಕ, ವಿಲಾಸ ಕೆಳಗಡೆ, ಆರ್.ಎಸ್.ಪಂಡಿತ, ಬಿ.ಎ.ದೇಸಾಯಿ, ಎ.ಎಚ್. ಹೊಸಮನಿ, ಎ.ಜಿ.ಗಿರೇನ್ನವರ, ವಿನೋದ ಬೈರನಟ್ಟಿ, ಬಿ.ಬಿ.ವಾಲಿ, ಬಿ.ಕೆ.ಸೊಂಟನವರ ಮುಂತಾದವರು ಇದ್ದರು.
ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ ನಿರೂಪಿಸಿದರು. ಡಿ.ಎಸ್.ಹುಗ್ಗಿ ವಂದಿಸಿದರು.

- Advertisement -

- Advertisement -

Leave A Reply

Your email address will not be published.