ಯಡಿಯೂರಪ್ಪನವರ ಸಂಪುಟಕ್ಕೆ 7 ಸಚಿವರ ಸೇರ್ಪಡೆ

ಬೆಳಗಾವಿ ಜಿಲ್ಲೆಯ 5ನೇ ಸಚಿವರಾದ ಉಮೇಶ್ ಕತ್ತಿ ಪ್ರಮಾಣ ವಚನ

0

ಬೆಂಗಳೂರು,ಜ.೧೩-ಒಂದೂವರೆ ವರ್ಷದಿಂದ ನಡೆಯುತ್ತಿದ್ದ ಯಡಿಯೂರಪ್ಪನವರ ಸಂಪುಟ ವಿಸ್ತರಣೆ ಪ್ರಹಸನಕ್ಕೆ 7 ಸೇರ್ಪಡೆಯೊಂದಿಗೆ ಮುಕ್ತಿ ದೊರೆತಂತಾಗಿದೆ.
ಅಳೆದು-ಸುರಿದು ಮಾಡಬಹುದಾಗಿದ್ದ ಎಲ್ಲ ಕಸರತ್ತನ್ನು ಮಾಡಿ ಹತ್ತು ಹಲವು ಸಚಿವಾಕಾಂಕ್ಷಿಗಳ ಅಸಮಾಧಾನಗಳ ನಡುವೆ ಯಡಿಯೂರಪ್ಪನವರು ಮುತ್ಸದ್ದಿತನವನ್ನು ಮೆರೆದಿದ್ದಾರೆ . ಚಾತಕಪಕ್ಷಿಯಂತೆ ಎದುರುನೋಡುತ್ತಿದ್ದ ಬಹುನಿರೀಕ್ಷಿತ ಸಚಿವ ಸಂಪುಟಕ್ಕೆ ಹೊಸದಾಗಿ ೭ ಮಂದಿ ಶಾಸಕರು ಇಂದು ಸಚಿವರಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಮಂತ್ರಿಮ೦ಡಲಕ್ಕೆ ಸೇರ್ಪಡೆಯಾದರು. ಸರಿಸುಮಾರು ಒಂದು ವರ್ಷದ ನಂತರ ನಡೆದ ಸಂಪುಟ ವಿಸ್ತರಣೆಯಲ್ಲಿ ಶಾಸಕರಾದ ಉಮೇಶ್ ಕತ್ತಿ(ಹುಕ್ಕೇರಿ), ಮುರುಗೇಶ್ ನಿರಾಣಿ(ಬೀಳಗಿ), ಎಸ್.ಅಂಗಾರ(ಸುಳ್ಯ), ಅರವಿಂದ ಲಿಂಬಾವಳಿ(ಮಹಾದೇವಪುರ) ಹಾಗೂ ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಆರ್.ಶಂಕರ್ ಮತ್ತು ಸಿ.ಪಿ.ಯೋಗೇಶ್ವರ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಜೆ ೩.೫೦ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಧಿಕಾರ ಗೌಪ್ಯತೆ ಬೋಧಿಸಿದರು.
ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಬಹುತೇಕ ಭರ್ತಿಯಾಗಿದ್ದು, ಅಬಕಾರಿ ಸಚಿವ ಹೆಚ್.ನಾಗೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಒಂದು ಸ್ಥಾನ ಮಾತ್ರ ಖಾಲಿ ಉಳಿಯಲಿದೆ.
ಮೇಲ್ನೋಟಕ್ಕೆ ಇದೊಂದು ಸಮತೋಲನದ ಸಂಪುಟ ರಚನೆ ಎಂದು ಹೇಳಲಾಗುತ್ತಿದ್ದರೂ ಸಿಎಂ ಯಡಿಯೂರಪ್ಪನವರು ರಾಜಕೀಯ ಲೆಕ್ಕಾಚಾರ ಹಾಕಿಯೇ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಪ್ರದೇಶವಾರು, ಜಾತಿಗೂ ಆದ್ಯತೆ ನೀಡಿರುವ ಅವರು ಸಾಮಾಜಿಕ ನ್ಯಾಯಕ್ಕೂ ಒತ್ತು ಕೊಟ್ಟಿದ್ದಾರೆ. ಸಂಪುಟಕ್ಕೆ ಸೇರ್ಪಡೆಯಾದ ೭ಮಂದಿ ಸಚಿವರಲ್ಲಿ ಇಬ್ಬರು ವೀರಶೈವರು, ೨ ಪರಿಶಿಷ್ಟ ಜಾತಿ, ೨ ಕುರುಬ ಹಾಗೂ ಒಬ್ಬರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ.
ಮುಂಬೈ ಕರ್ನಾಟಕ ಭಾಗದಿಂದ ಪ್ರಬಲ ವೀರಶೈವ ಸಮುದಾಯಕ್ಕೆ ಸೇರಿದ ಹಿರಿಯ ಮುಖಂಡ ಉಮೇಶ್ ಕತ್ತಿ, ಕಲ್ಯಾಣ ಕರ್ನಾಟಕ ಭಾಗದಿಂದ ಪಂಚಮಸಾಲಿಯ ಪ್ರಭಾವಿ ನಾಯಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಲಾಗಿದೆ. ನಾಯಕತ್ವದ ವಿರುದ್ಧ ಪದೇ ಪದೇ ಬಹಿರಂಗ ಹೇಳಿಕೆ ನೀಡುತ್ತಿದ್ದ ಬಸವನಗೌಡ ಪಾಟೀಲ್ ಯತ್ನಾಳ್‌ಗೆ ಪರ್ಯಾಯವಾಗಿ ನೀರಾಣಿಯನ್ನು ಸಂಪುಟಕ್ಕೆ ತೆಗೆದುಕೊಂಡು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ ಬಿಎಸ್‌ವೈ ಅವರದ್ದಾಗಿದೆ.
ಪರಿಶಿಷ್ಟ ಜಾತಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಅಸಮಾಧಾನವನ್ನು ತಣ್ಣಗಾಗಿಸಲು ಈ ಬಾರಿ ಅದೇ ಸಮುದಾಯವನ್ನು ಪ್ರತಿನಿಧಿಸುವ ಇಬ್ಬರಿಗೆ ಸಚಿವ ಸ್ಥಾನ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸತತ ೬ ಬಾರಿ ಗೆದ್ದಿರುವ ಅಂಗಾರ ಮೊದಲಬಾರಿಗೆ ಸಚಿವರಾಗಿದ್ದಾರೆ.
ಕೆಲವು ಕಾರಣಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ಹಾಗೂ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಗೂ ಸಚಿವ ಸ್ಥಾನ ಕೊಡುವ ಮೂಲಕ ಎಸ್ಸಿ ಸಮುದಾಯಕ್ಕೆ ತಮ್ಮ ಪಕ್ಷ ಸೂಕ್ತ ಸ್ಥಾನಮಾನ ನೀಡಿದೆ ಎಂಬ ಸಂದೇಶವನ್ನು ರವಾನಿಸಲಾಗಿದೆ. ಸರ್ಕಾರ ರಚನೆಗಾಗಿ ತಮ್ಮ ಸಚಿವ ಹಾಗೂ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದ್ದ ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ಮತ್ತು ಆರ್.ಶಂರ‍್ಗೆ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಲಾಗಿದೆ. ಇಬ್ಬರೂ ಕೂಡ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವಲ್ಲಿ ತೆರೆಮರೆಯಲ್ಲಿ ಕುಳಿತು ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಹಾಗೂ ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ರ‍್ಗೂ ಕೂಡ ಮಂತ್ರಿಯಾಗುವ ಅದೃಷ್ಟ ಒದಗಿಬಂದಿದೆ. ಕೊನೆ ಕ್ಷಣದವರೆಗೂ ಸಂಪುಟಕ್ಕೆ ಸೇರ್ಪಡೆಯಾಗಲು ಮುನಿರತ್ನ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಚಿತ್ರದುರ್ಗದ ತಿಪ್ಪಾರೆಡ್ಡಿ, ಹಾಲಪ್ಪ ಆಚಾರ್, ಬಸವನಗೌಡ ಪಾಟೀಲ್ ಯತ್ನಾಳ್, ಸುನಿಲ್‌ಕುಮಾರ್, ರಾಜುಗೌಡ ನಾಯಕ್ ಸೇರಿದಂತೆ ಅನೇಕರು ನಡೆಸಿದ ಪ್ರಯತ್ನ ಫಲಕೊಡಲಿಲ್ಲ.
ವರಿಷ್ಠರ ನಿರ್ದೇಶನವನ್ನು ಕಟ್ಟು£ಟ್ಟಾಗಿ ಪಾಲನೆ ಮಾಡಲೇಬೇಕಾದ ಸಂದಿಗ್ಧ ಸ್ಥಿತಿಯಲ್ಲಿದ್ದ ಯಡಿಯೂರಪ್ಪ ಅವರು ಆರ್.ಆರ್.ನಗರ ಉಪಚುನಾವಣೆಯಲ್ಲಿ ಮುನಿರತ್ನಗೆ ಕೊಟ್ಟಿದ್ದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಸಂಪುಟಕ್ಕೆ ಸೇರ್ಪಡೆಯಾಗಲು ಕೊನೆ ಕ್ಷಣದವರೆಗೂ ಮು£ರತ್ನ ಇನಿ್ನಲ್ಲದ ಕಸರತ್ತು ನಡೆಸಿದರು. ಉಪಮುಖ್ಯಮಂತ್ರಿ ಲಕ್ಷ÷್ಮಣ್ ಸವದಿ, ಸಚಿವರಾದ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ಸೇರಿದಂತೆ ಅನೇಕರು ನಡೆಸಿದ ಪ್ರಯತ್ನವೂ ವಿಫಲವಾಯಿತು.

ನೂತನ ಸಚಿವರಿಗೆ ವಿಧಾನಸೌಧ ನೂತನ ಕೊಠಡಿ ಹಂಚಿಕೆ ಮಾಡಲಾಗಿದೆ.

ಉಮೇಶ ಕತ್ತಿ-329, 329A ,     ಎಂಟಿಬಿ ನಾಗರಾಜ-330, 330A ,     ಆರ್.ಶಂಕರ-305 ,305 A   ,     ಎಸ್.ಅಂಗಾರ- 352-353A

ಅರವಿಂದ ಲಿಂಬಾವಳಿ-344, 344A    ,          ಸಿ.ಪಿ.ಯೋಗೆಶ್ವರ-336, 336A   ,             ಮುರಗೇಶ ನಿರಾಣಿ.-307, 307 A

- Advertisement -

- Advertisement -

Leave A Reply

Your email address will not be published.