ಮುದ್ದೇಬಿಹಾಳ ತಾಲೂಕನ್ನು ಮಾದರಿ ತಾಲೂಕಾಗಿ ಮಾಡಲು ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ-ಉಪ ಲೋಕಾಯುಕ್ತ ಪಾಟೀಲ್

ವಿಜಯಪುರ ಜ.೧೩ : ಸ್ವಚ್ಛತೆ ನಮ್ಮ ಮೂಲಭೂತ ಹಕ್ಕು. ಆ ಹಕ್ಕಿಗೆ ಧಕ್ಕೆ ಬರದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷತೆ ಕಂಡು ಬಂದರೆ ನಿರ್ದಾಕ್ಷಣ್ಯ ಕ್ರಮ ಜರುಗಿಸಲಾಗುವುದು ಎಂದು ನ್ಯಾಯಮೂರ್ತಿ ಹಾಗೂ ರಾಜ್ಯ ಉಪ ಲೋಕಾಯುಕ್ತರಾದ ಪಾಟೀಲ್ ಅವರು ಹೇಳಿದರು.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಈಗಾಗಲೇ ಕುಡಿಯುವ ನೀರಿನ ಘಟಕಗಳು ಎಷ್ಟು ಚಾಲ್ತಿಯಲ್ಲಿವೆ. ದುರಸ್ತಿಗಳೆಷ್ಟು. ಈ ಬಗ್ಗೆ ತಕ್ಷಣ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶುದ್ಧ ಕುಡಿಯುವ ನೀರಿನ ಘಟಕ ಬಗ್ಗೆ ದೂರುಗಳು ಬಂದಿದ್ದು, ಸರಿಯಾದ ರೀತಿ ಘಟಕಗಳು ಕಾರ್ಯನಿರ್ವಹಿಸುತ್ತಿಲ,್ಲ ಅಧಿಕಾರಿಗಳು ಕೂಡ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಹೀಗಾಗಿ ಸ್ವಯಂಪ್ರೇರಿತ ದೂರು ದಾಖಲಿಸಲಾಗುವುದು. ಮುಂದಿನ ತಿಂಗಳ ೨೪ ರಂದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಹೀಗೆ ಸ್ವಯಂಪ್ರೇರಿತವಾಗಿ ದೂರುಗಳನ್ನು ದಾಖಲಿಸಿ, ವಿಚಾರಣೆ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದು. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ಸ್ಥಿತಿ ಬಹಳ ಶೋಚನೀಯ ಸ್ಥಿತಿ ಕಂಡುಬರುತ್ತಿದೆ. ಸಮರ್ಪಕವಾಗಿ ಅಧಿಕಾರಿಗಳು ಕ್ರಮ ಜರುಗಿಸಬೇಕು. ಈಗಾಗಲೇ ಸರಕಾರದಿಂದ ಅನುದಾನ ನೀಡಲಾಗಿದೆ. ಬಳಸದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಒಂದು ವೇಳೆ ಅಧಿಕಾರಿಗಳ ಲೋಪ ಕಂಡುಬAದಲ್ಲಿ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈಗಾಗಲೇ ಎಲ್ಲ ತಾಲೂಕುಗಳ ಇಒ ಗಳ ಮೇಲೆ ದೂರು ದಾಖಲಿಸಲಾಗಿದೆ. ಎಲ್ಲ ಇಒ ಗಳು ತಮ್ಮ ಕರ್ತವ್ಯ ಪರಿಪಾಲನೆ ಮಾಡಿ, ಸಾರ್ವಜನಿಕರು ದೂರು ತೆಗೆದುಕೊಂಡು ಕಚೇರಿಗೆ ಬರುವುದನ್ನು ತಪ್ಪಿಸಬೇಕು.
ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಮನವರಿಕೆ ಮಾಡಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವಂತೆ ರೈತರನ್ನು ಮನವೊಲಿಸಿ ಅಧಿಕಾರಿಗಳು ಸರಿಯಾಗಿ ರೈತರೊಂದಿಗೆ ಸ್ಪಂದಿಸದಿದ್ದರೆ ಅವರ ಮೇಲೂ ಕೂಡ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು.
ಈಗಾಗಲೇ ರೈತರ ಹೊಲಗಳಿಗೆ ಭೇಟಿ ನೀಡಿ ಮಣ್ಣು ಪರೀಕ್ಷೆ ಮಾಡಲಾಗಿದೆ. ಈ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಬೇಕು. ರೈತರು ಬೆಳೆದ ಬೆಳೆಗಳಿಗೆ ಯಾವ ಯಾವ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂಬ ವಿವರಗಳನ್ನು ಶೀಘ್ರವಾಗಿ ನೀಡಿ ಎಂದು ಅವರು ಅಧಿಕಾರಿಗಳಿಗೆ ಹೇಳಿದರು.
ತಾಲೂಕಿನ ಎಲ್ಲ ಶಾಲೆಗಳಲ್ಲಿ ಕಂಪೌAಡ ನಿರ್ಮಿಸಬೇಕು. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು. ಇಂದಿನ ಮಕ್ಕಳು ನಾಳಿನ ಭವಿಷ್ಯ ಪ್ರಜೆಗಳಾಗಬಲ್ಲರು. ಅದರೊಂದಿಗೆ ಮಕ್ಕಳಿಗೆ ಉತ್ಸಾಹ ಪ್ರೋತ್ಸಾಹ ತುಂಬುವAತಹ ಪಠ್ಯಪುಸ್ತಕಗಳು, ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ತೀಕ್ಷ÷್ಣತೆಯ ಮನೋಭಾವ ಹೆಚ್ಚಿಸುವಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಹೇಳಿದರು.
ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳು ಬಹಳಷ್ಟು ಸುಸ್ಥಿತಿಯಲ್ಲಿವೆ ಈ ಕುರಿತು ವರದಿ ನೀಡುವಂತೆ ಸೂಚಿಸಿದರು. ಶಾಲೆಯಲ್ಲಿ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯವಾಗಿದೆ. ಇದರ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಬೇಕು.
ತಾಲೂಕಿನಲ್ಲಿ ಕಾಲುವೆಗಳು ಬಹಳ ಹದಗೆಟ್ಟ ಬಗ್ಗೆ ದೂರುಗಳು ಬಂದಿವೆ. ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾಳಾಗುತ್ತಿವೆ. ಈ ಕುರಿತು ಗುತ್ತಿಗೆದಾರರಿಂದ ಕಾಮಗಾರಿಗಳಿಗೆಷ್ಟಾಗಿವೆ. ಹಾಗೂ ಗುತ್ತಿಗೆದಾರರಿಗೆ ನೋಟಿಸ್ ನೀಡಿದ ಕ್ರಮಗಳ ಕುರಿತು ಸಮಗ್ರ ವರದಿ ನೀಡಬೇಕು. ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ ದೂರು ದಾಖಲಿಸಲಾಗುವುದು ಎಂದು ಹೇಳಿದರು.
ಅದರಂತೆ ಪಶುವೈದ್ಯಾಧಿಕಾರಿಗಳು ದನಕರುಗಳಿಗೆ ಕಾಯಿಲೆ ಕಂಡುಬAದಲ್ಲಿ ರೈತರಿಂದ ದೂರವಾಣಿ ಮೂಲಕ ಕರೆದರೆ ರೈತರೊಂದಿಗೆ ಸರಿಯಾದ ರೀತಿಯಲ್ಲಿ ಹಾಗೂ ತಕ್ಷಣ ಕ್ರಮವಹಿಸಿ ತಾಲೂಕಿನಲ್ಲಿ ಎಷ್ಟು ಚೆಕ್ಡ್ಯಾಮ್ ನಿರ್ಮಿಸಲಾಗಿದೆ ಬಂದಾರುಗಳೆಷ್ಟು, ನೀರು ಪೋಲಾಗುತ್ತಿರುವುದರ ಬಗ್ಗೆ ಆದಷ್ಟು ಶೀಘ್ರ ವರದಿ ನೀಡಬೇಕು.
ಜಮೀನುಗಳಿಗೆ ಪರಿಹಾರ ಒದಗಿಸಿದ ಬಗ್ಗೆ ವಿವರ ನೀಡಬೇಕು. ರೈತರ ಜಮೀನುಗಳಿಗೆ ಮೊದಲು ಪರಿಹಾರ ನೀಡಿ, ನಂತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಮುದ್ದೇಬಿಹಾಳ ಒಂದು ಮಾದರಿ ತಾಲೂಕಾಗಿ ಮಾಡುವಂತೆ ಅಧಿಕಾರಿಗಳು ಶ್ರಮಿಸಬೇಕು. ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಯಾವ ಅಧಿಕಾರಿಗಳು ಮಾತನಾಡಬಾರದು ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಯಶೋಧಾ ಒಂಟಗೋಡಿ, ಲೋಕಾಯುಕ್ತ ಡಿವೈಎಸ್ಪಿ ಶ್ರೀ ಯಲಿಗಾರ, ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.