hallur

ಬಾಕಿ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ -ಸಂಸದ ರಮೇಶ ಜಿಗಜಿಣಗಿ

0

ವಿಜಯಪುರ ಜ.೧೩ : ಜಿಲ್ಲೆಯ ಹೊರ್ತಿ ಮಾರ್ಗವಾಗಿ ಇಂಡಿಯಿAದ ಹಳ್ಳಗುಣಕಿಯವರೆಗಿನ ರಸ್ತೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಸಂಸದರಾದ ಶ್ರೀ ರಮೇಶ ಜಿಗಜಿಣಗಿ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ದಿನಾಂಕ: ೧೨-೦೧-೨೦೨೧ ರಂದು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಜರುಗಿದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ದಿಶಾ (ಆISಊಂ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅದರಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಕ್ಷಿö್ಮÃಕಾಂತ ರೆಡ್ಡಿ ಅವರು ಮಾತನಾಡಿ ಮಹಾತ್ಮಾಗಾಂಧೀ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೨,೭೦,೩೯೬ ಕುಟುಂಬಗಳು ನೊಂದಣಿ ಮಾಡಿಕೊಂಡಿವೆ. ೨,೭೦,೨೮೦ ಕುಟುಂಬಗಳಿಗೆ ಉದ್ಯೋಗ ಚೀಟಿಗಳನ್ನು ನೀಡಲಾಗಿದೆ. ೧೦೪೬ ಕುಟುಂಬಗಳು ೧೦೦ ದಿನ ಉದ್ಯೋಗ ಪೂರ್ಣಗೊಳಿಸಿವೆ. ೧೦೮೩೫೯ ಕುಟುಂಬಗಳಿಗೆ ಉದ್ಯೋಗ ಬೇಡಿ ಅರ್ಜಿ ಸಲ್ಲಿಸಿದ್ದು, ೯೨,೮೫೧ ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಹಾಗೂ ಒಟ್ಟು ೪೪,೫೧೯ ಕಾಮಗಾರಿಗಳಿವೆ. ಅದರಲ್ಲಿ ೧೬೧೩೮ ಕಾಮಗಾರಿಗಳು ಪೂರ್ಣಗೊಂಡಿದ್ದು ೨೮೩೮೧ ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟು ೩೮,೨೯,೫೪೯ ಮಾನವ ದಿನಗಳ ಉತ್ಪತ್ತಿಯಾಗಿವೆ ಎಂದು ಸಭೆಗೆ ವಿವರಿಸಿದರು.

ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ (ಓಖಐಒ)ದ ಯೋಜನಾ ನಿರ್ದೇಶಕರು ಮಾತನಾಡಿ ಒಟ್ಟು ೨೧೨ ಗ್ರಾಮ ಪಂಚಾಯತ್‌ಗಳಲ್ಲಿ ೧೫೯ ಗ್ರಾಮ ಪಂಚಾಯತ್ ಒಕ್ಕೂಟಗಳ ರಚನೆ ಮಾಡಲಾಗಿದೆ. ೮೩ ಒಕ್ಕೂಟಗಳಿಗೆ ೮೦೩.೨೫ ಲಕ್ಷಗಳ ಅನುದಾವನ್ನು ಸ್ವ ಸಹಾಯ ಸಂಘಗಳ ಮಹಿಳೆಯರು ಸಾಲವನ್ನು ಪಡೆದುಕೊಂಡು ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರನ್ನಾಗಿ ಹೊಂದಲು ಖರ್ಚುಮಾಡಲಾಗಿದೆ ಎಂದು ತಿಳಿಸಿದರು.

ದೀನ್ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಆಆU-ಉಏಙ)ಯ ಯೋಜನಾ ನಿರ್ದೇಶಕರು ಮಾತನಾಡುತ್ತಾ, ಕೋವಿಡ್-೧೯ರ ಪ್ರಯುಕ್ತ ಇಲ್ಲಿಯವರೆಗೆ ಯಾವುದೇ ತರಬೇತಿಯನ್ನು ಸ್ಥಗಿತಗೊಳಿಸಿದ್ದು ಇನ್ನೂ ಹಮ್ಮಿಕೊಳ್ಳುವ ತರಬೇತಿಯ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PಒಉSಙ)ಯ ಕಾರ್ಯನಿರ್ವಾಹಕ ಅಭಿಯಂತರರು ಮಾತನಾಡುತ್ತಾ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ೧೧೧.೫೨ ಕಿ ಮಿ ರಸ್ತೆ ಮಂಜೂರಾಗಿದ್ದು ೪.೫ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಭೆ ಗಮನಕ್ಕೆ ತಂದಾಗ ಸಂಸದರಾದ ರಮೇಶ ಜಿಗಜಿಣಗಿ ಅವರು ಇನ್ನೂಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.

ಅದೇ ರೀತಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಊousiಟಿg ಜಿoಡಿ ಚಿಟಟ_ Uಡಿbಚಿಟಿ)ಯ ೧೦೧ ಪ್ರೋಜೆಟ್‌ಗಳಲ್ಲಿ ೧೯೯೫೭ ಮೆನಗಳನ್ನು ಮಂಜೂರಿಸಿಲಾಗಿದೆ. ೧೭೦೭೨ ಫಲಾನುಭವಿಗಳನ್ನು ಅನುಮೋದಿಸಲ್ಪಟ್ಟಿದ್ದು, ೩೫೪೨ ಪ್ರಾರಂಭವಾಗಿದ್ದು, ೧೫೩೩ ಪಾಯಾ ಹಂತದಲ್ಲಿ ೨೭೩೭ ಲಿಂಟನ್ ಹಂತದಲ್ಲಿ, ೨೭೧೪ ರೋಫ್ ಹಂತದಲ್ಲಿ ಹಾಗೂ ೫೬೨೮ ಪೂರ್ಣಗೊಂಡಿರುತ್ತದೆAದು ಅವರು ಸಭೆಯಲ್ಲಿ ಮಂಡಿಸಿದರು

ಇನ್ನು ಪ್ರಧಾನ ಮಂತ್ರಿ ಜಲಜೀವನ ಯೋಜನೆಯ ಬಗ್ಗೆ ಮಾತಾನಾಡುತ್ತಾ ಪ್ರತಿ ಗ್ರಾಮ ಮನೆ ಮನೆಗೂ ೫೫ ಐPಅಆ ನೀರು ತಲುಪಿಸಬೇಕೆಂದು ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯನ್ನು ಮೂರು ವರ್ಷಗಳಲ್ಲಿ ತಲುಪಿಸಬೇಕೆಂದು ರಾಜ್ಯ ಸರ್ಕಾರ ಗುರಿಯನ್ನು ಇಟ್ಟುಕೊಂಡಿದೆ. ಪ್ರಸಕ್ತ ವರ್ಷದಲ್ಲಿ ೨೯೮ ಗ್ರಾಮಗಳಲ್ಲಿ ೧೧೫೦೦೦ ಮನೆಗಳಿಗೆ ತಲುಪಿಬೇಕೆಂದು ನಿಟ್ಟಿನಲ್ಲಿ ೮೮ ಕಡೆಗಳಲ್ಲಿ ವರ್ಕ್ ಆರ್ಡರ್‌ಗಳನ್ನು ನೀಡಲಾಗಿದೆ. ಹಾಗೂ ೧೫ ಕಡೆಗಳಲ್ಲಿ ಕೆಲಸಗಳು ಪ್ರಾರಂಭವಾಗಿದೆ ಉಳಿದ ಕಾಮಗಾರಿಯು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಸಭೆಯಲ್ಲಿ ಮಂಡಿಸಿದರು.

ಅದರAತೆ ೧೫೦ ಗ್ರಾಮಗಳಲ್ಲಿ ೧೦೦ ದಿನಗಳ ಮಿಶನ್ ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ಕುಡಿಯುವ ನೀರು ಸಂಪರ್ಕವನ್ನು ಇನ್ನೂ ಎರಡು ತಿಂಗಳಲ್ಲಿ ಕಲ್ಪಿಸಲಾಗುವುದು ಎಂದು ಸಭೆಯಲ್ಲಿ ಮಂಡಿಸಿದ್ದರು.

ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ(Pಒಂಉಙ)ಯ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ರವರು ಮಾತನಾಡುತ್ತಾ ಎರಡು ಕಂತುಗಳಲ್ಲಿ ಅನುದಾನ ಬಿಡುಗಡೆಯಾಗಿದೆ. ನೀರನ್ನು ಗ್ರಾಮೀನ ಕುಡಿಯುವ ನೀರು ಸರಬರಾಜು ಇಲಾಖೆಯನ್ನು ಆಯ್ಕೆ ಮಾಡಲಾಗಿದೆ. ಹಾಗೂ ಉಳಿದ ಕಾಮಗಾರಿಗಳಿಗಾಗಿ Pಖಇಆ ಆಯ್ಕೆ ಮಾಡಲಾಗಿದೆ. ಅಂದಾಜು ಪಟ್ಟಿಯನ್ನು ಸಿದ್ದಗೊಂಡಿದ್ದು, ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ೨೦೧೮-೧೯ – ೧೦ ಗ್ರಾಮಗಳು ಹಾಗೂ ೨೦೧೯-೨೦ ೧೦ ಗ್ರಾಮಗಳು ಆಯ್ಕೆ ಮಾಡಲಾಗಿದೆ ೨೦೧೮-೧೯ನೇ ಸಾಲಿನ ಕ್ರಿಯಾ ಯೋಜನೆ ತಡವಾಗಿದ್ದು, ಸಧ್ಯ ಕಾಮಗಾರಿಗಳು ಪ್ರಾರಂಭಗೊAಡಿದೆ. ಹಾಗೂ ೨೦೧೯-೨೦ನೇ ಸಾಲಿನ ಕ್ರಿಯಾ ಯೋಜನೆ ಅನುಮೋದಿಸಲ್ಪಟ್ಟ ನಂತರ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಮಂಡಿಸಿದರು.

ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ)ಯ ಉಪ ಕಾರ್ಯದರ್ಶಿಗಳು ಮಾತನಾಡುತ್ತಾ ೨೦೨೦-೨೧ನೇ ಸಾಲಿಗೆ ಒಟ್ಟು ೧೦೪೧೯ ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಇದ್ದು, ಇದರಲ್ಲಿ ೧೦೪೧೫ ಸಾಧನೆ ಮಾಡಲಾಗಿದೆ. ೦೯ ಶೌಚಾಲಯಗಳು ಪ್ರಗತಿಯಲ್ಲಿದ್ದು, ಇನ್ನೂ ೦೪ ಶೌಚಾಲಯಗಳು ಬಾಕಿ ಉಳಿದಿರುತ್ತವೆ. ಮುಂದುವರಿದು ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ) ಆರ್ಥಿಕ ಪ್ರಗತಿಯ ವರದಿ ಒಟ್ಟು ಲಭ್ಯವಿರುವ ಅನುದಾನ ರೂ. ೬೧೮.೮೬ ಲಕ್ಷ ಇದ್ದು ರೂ. ೪೯೦.೬೩ ಲಕ್ಷ ಅನುದಾನ ವಿನಿಯೋಗಿಸಲಾಗಿದ್ದು ರೂ.೧೨೮.೨೩ ಬಾಕಿ ಉಳಿದಿರುತ್ತದೆ ಎಂದು ಸಭೆಗೆ ಗಮನಕ್ಕೆ ತಂದರು.

ರಾಷ್ಟಿçÃಯ ಗ್ರಾಮೀಣ ಕುಡಿಯುವ ನೀರು ಯೋಜನೆ(ಓಖಆWP)ಯ ಕಾರ್ಯನಿರ್ವಾಹಕ ಅಭಿಯಂತರರು ಮಾತನಾಡುತ್ತಾ, ಕುಡಿಯುವ ನೀರು ಯೋಜನೆಯಡಿ ವಿಜಯಪುರ-೯೬ ಇಂಡಿ-೪೦ ಬಸವನ ಬಾಗೆವಾಡಿ-೮೫ ಮುದ್ದೇಬಿಹಾಳ-೬೮ ಮತ್ತು ಸಿಂದಗಿ-೩೯ ಒಟ್ಟು ೩೨೮ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಮಂಜೂರಾಗಿವೆ. ಇವುಗಳಲ್ಲಿ ೨೩೫ ಪೂರ್ಣಗೊಂಡಿದ್ದು, ೯೩ ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಕ್ಷಿö್ಮÃಕಾಂತ ರೆಡ್ಡಿ, ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಉಪಸ್ಥಿತರಿದ್ದರು.

- Advertisement -

- Advertisement -

Leave A Reply

Your email address will not be published.