BallaryBelagavibidarGadaggulburgakarwar uttar kannadaKoppalStatevijayapur

ಭೂಸುಧಾರಣೆ ಕಾಯ್ದೆ -೨೦೨೦ನ್ನು ವಾಪಸ್ ಪಡೆಯಬೇಕು


ಧಾರವಾಡ: ಕೇಂದ್ರದ ಕೃಷಿ ಸಂಬ0ಧೀ ಕಾಯ್ದೆಗಳಿಗೆ ಸುಪ್ರೀಮ್ ಕೋರ್ಟ್ ನೀಡಿದ ತಡೆಯಾಜ್ಞೆ ಗಮನಿಸಿ ರಾಜ್ಯ ಸರಕಾರ ಕರ್ನಾಟಕ ಭೂಸುಧಾರಣೆ ಕಾಯ್ದೆ (ಎರಡನೆ ತಿದ್ದುಪಡಿ) ಶಾಸನ- ೨೦೨೦ನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಒತ್ತಾಯಿಸಿದ್ದಾರೆ.
ರೈತ ಕುಲಕ್ಕೆ ಮಾರಕವಾದ ಕಾಯ್ದೆಗಳಿಗೆ ಸುಪ್ರೀಮ್ ಕೋರ್ಟ್ ತಡೆ ನೀಡಿದ್ದು ರೈತ ಕುಲದ ಗೆಲುವಾಗಿದೆ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಅವರು ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಭೂ ಸುಧಾರಣೆ ಕಾಯ್ದಗೆ ತಿದ್ದುಪಡಿ ತಂದು ಕಳೆದ ಜುಲೈ ೧೩ ಮತ್ತು ನವೆಂಬರ್ ೨ರಂದು ರಾಜ್ಯ ಸರಕಾರವು ಪ್ರತ್ಯೇಕ ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿತ್ತು. ಇವೆರಡೂ ಸುಗ್ರೀವಾಜ್ಞೆಗಳನ್ನು ರಾಜ್ಯ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯ ಮೂಲಕ ಪ್ರಶ್ನಿಸಲಾಗಿತ್ತು.
ಪ್ರಕರಣದ ವಿಚಾರಣೆಯಲ್ಲಿ ಕೋರ್ಟ್, ದಾವೆಯಲ್ಲಿನ ಅಂಶಗಳನ್ನು ಮನವರಿಕೆ ಮಾಡಿಕೊಂಡು ಸುಗ್ರೀವಾಜ್ಞೆ ಆಧರಿಸಿ ನಡೆದ ಪ್ರಕ್ರಿಯೆಗಳು ತನ್ನ ಅಂತಿಮ ಆದೇಶಕ್ಕೆ ಒಳಪಡುತ್ತವೆ ಎಂದು ಹೇಳಿದ್ದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು.
ಸರಕಾರ ಜಾರಿಗೊಳಿಸಿರುವ ಕಾಯ್ದೆ ಸದರಿ ಸುಗ್ರೀವಾಜ್ಞೆಯನ್ನೇ ಆಧರಿಸಿದ್ದಾಗಿದೆ. ೧ನೆ ಸುಗ್ರೀವಾಜ್ಞೆಯಲ್ಲಿ ಭೂ ಸುಧಾರಣೆ ಕಾಯ್ದೆಯ ಸೆಕ್ಷನ್ ೬೩ನ್ನು ತೆಗೆದು ಹಾಕಿತ್ತು. ೨ನೆ ಸುಗ್ರೀವಾಜ್ಞೆಯಲ್ಲಿ ಸೆ. ೬೩ನ್ನು ಯಥಾವತ್ತಾಗಿ ಉಳಿಸಿಕೊಂಡು ಸೆಕ್ಷನ್ ೭೯ ಎ, ಬಿ, ಸಿಗಳನ್ನು ೧೯೭೪ರ ಮಾರ್ಚ್ ೧ರಿಂದ ಪೂರ್ವಾನ್ವಯ ಆಗುವಂತೆ ತೆಗೆದು ಹಾಕಿ ಸೆ. ೮೦ ಮತ್ತು ೮೧ಕ್ಕೆ ತಿದ್ದುಪಡಿಗಳನ್ನು ಸೇರಿಸಿದೆ.
ಒಂದು ಕಾಯ್ದೆ ೪೫ಕ್ಕೂ ಹೆಚ್ಚು ವರ್ಷ ಕಾಲ ಪೂರ್ವಾನ್ವಯವಾಗಿ ಜಾರಿಯಾಗಬೇಕೆ? ಸೆ. ೭೯ನ್ನು ತೆಗೆದು ಹಾಕಿದ್ದರಿಂದ ಜಮೀನು ಖರೀದಿಯಲ್ಲಿ ಬಹುರಾಷ್ಟಿçÃಯ ಕಂಪೆನಿಗಳು, ಪಾಲುದಾರಿಕೆ ಸಂಸ್ಥೆöಗಳ ಪಾತ್ರವೇನು? ಎಂಬಿತ್ಯಾದಿ ಮಹತ್ವದ ಪ್ರಶ್ನೆಗಳು ಹೈಕೋರ್ಟಿನ ಮುಂದಿವೆ.
ಈ ಹಂತದಲ್ಲಿ ಸುಪ್ರೀಮ್ ಕೋರ್ಟ್ ಕೇಂದ್ರದ ಕೃಷಿ ಕಾಯ್ದೆಗಳಿಗೆ ತಡೆ ನೀಡಿದ ಬೆಳವಣಿಗೆಗಳು ಸಂವಿಧಾನಾನ ವಿರೋಧಿ ನೀತಿಗಳನ್ನು ತಡೆಯುವ ಕ್ರಮವಾಗಿದೆ. ರಾಜ್ಯ ಸರಕಾರ ಈಗಲಾದರೂ ತನ್ನ ಹಠ ಬಿಡಬೇಕು. ಸಂವಿಧಾನ ವಿರೋಧಿ ಭೂ ಸುಧಾರಣೆ ಶಾಸನ- ೨೦೨೦ನ್ನು ಹಿಂಪಡೆಯಬೇಕು ಎಂದು ರಾಜ್ಯ ಹೈಕೋಟಿನಲ್ಲಿ ಭೂ ಸುಧಾರಣೆ ಕಾಯ್ದೆ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿರುವ ಮೂಲ ದಾವೆದಾರರು ಆದ ನಾಗರಾಜ ಹೊಂಗಲ್ ಅವರು ಆಗ್ರಹಿಸಿದರು.


Leave a Reply