ದ್ರಾಕ್ಷಿ ಮತ್ತು ದಾಳಿಂಬೆ ರೈತ ಬಾಂಧವರ ಗಮನಕ್ಕೆ

ಗದಗ  13: ಅಕಾಲಿಕವಾಗಿ ಮಳೆ ಬಿದ್ದಿರುವ ಕಾರಣ ತೋಟಗಾರಿಕಾ ಬೆಳೆಗಳಲ್ಲಿ ಕೀಟ ಬಾಧೆಯು ಕಂಡುಬಂದಿದ್ದು, ಅವುಗಳ ನಿಯಂತ್ರಣದ ಸಲಹೆಗಳನ್ನು ತೋಟಗಾರಿಕಾ ಇಲಾಖೆಯು ರೈತರಿಗೆ ತಿಳಿಸಿದೆ. ಅದರಲ್ಲಿ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳ ಕೀಟ ಬಾಧೆಯ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದೆ.
ದ್ಯಾಕ್ಷಿ
ದ್ಯಾಕ್ಷಿ ಗೊಂಚಲುಗಳಲ್ಲಿನ ಕಾಳುಗಳಲ್ಲಿ ಸಕ್ಕರೆ ಅಂಶ ಕಂಡು ಬರುವ ಹಂತದಲ್ಲಿರುವ ತೋಟಗಳಲ್ಲಿ ಕಾಳುಗಳು ಸೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದಕಾರಣ ಚಿಲೆಟೇಡ್ ಕ್ಲಾಲ್ಸಿಯಂ 1ಗ್ರಾಂ/ಲೀ ಹಾಗೂ ಬೋರಾನ್ 1 ಗ್ರಾಂ/ಲೀ ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕು.
ದ್ಯಾಕ್ಷಿ ಗೊಂಚಲುಗಳಲ್ಲಿನ ಕಾಳುಗಳು ಇನ್ನೂ ನೀರು ತುಂಬುವ ಹಂತ ಪ್ರಾರಂಭವಾಗದೇ ಇದ್ದಲ್ಲಿ ಕಾಳುಗಳು ಸೀಳುವ ಸಾಧ್ಯತೆ ಕಡಿಮೆ. ಈಗಾಗಲೇ ಡೌನಿ(ಬೊಜು ತುಪ್ಪಟ) ರೋಗದ ಬಾಧೆ ಇರುವ ತೋಟಗಳಲ್ಲಿ ಫಾಸಟೈಲ್-ಎ.ಎಲ್ (ಅಲಿಯೇಟ್ಸ) 2 ಗ್ರಾಂ/ಲೀ ಪ್ರಮಾನದಲ್ಲಿ ಸಿಂಪಡಣೆ ಮಾಡಬೇಕು. ಡೌನಿ ರೋಗವಿಲ್ಲದಿರುವಲ್ಲಿ ತೋಟಗಳಲ್ಲಿ ಮ್ಯಾಮಡಿ ಪ್ರೊಪಮೈಡ್(ಕೇವಸ್) 0.60 ಮಿ.ಲೀ/ಲೀ ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕು.
ದ್ಯಾಕ್ಷಿ ಹಣ್ಣುಗಳು ಸಂಪೂರ್ಣವಾಗಿ ಸಕ್ಕರೆ ಅಮಶ ಅಭಿವೃದ್ಧಿಯಾಗಿದ್ದರೆ ಕ್ಯಾಲ್ಸಿಯಂ-ಚಿಲೇಟೆಡ್ 1 ಗ್ರಾಂ/ಲೀ ಪ್ರಮಾಣದಲ್ಲಿ ಸಿಂಪಡಣೆ ಮತ್ತು ಮರುದಿನ ಟ್ರೈಕೋಡರ್ಮಾ ಜೈವಿಕ ಶಿಲೀಂದ್ರ ನಾಶಕವನ್ನು 5 ಗ್ರಾಂ/ಲೀ ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕು. ಹನಿ ನೀರಾವರಿ ಮೂಲಕ 00:00:50 ಪೋಟ್ಯಾಶ್ ಗೊಬ್ಬರವನ್ನು ಮುಂದುವರಿಸಬೇಕು.
ದಾಳಿಂಬೆ
ದಾಳಿಂಬೆಗೆ ಭೂಮಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮತ್ತು ವಿಶ್ರಾಂತಿಯಲ್ಲಿರುವ ಗಿಡಗಳಿಗೆ ಶೇ.1ರ ಬೋರ್ಡೋ ದ್ರಾವಣವನ್ನು ಸಿಂಪಡಣೆ ಮಾಡಬೇಕು. ಕಾಯಿ ಮತ್ತು ಹೂವಿನ ಹಂತದಲ್ಲಿರುವ ತೋಟಗಳಲ್ಲಿ ದುಂಡಾಣು ರೋಗದ ಬಾಧೆ ಇದ್ದಲ್ಲಿ ಸ್ಟೇಪ್ಟೋಸೈಕ್ಲಿನ್ 0.50 ಗ್ರಾಂ ಮತ್ತು 2 ಗ್ರಾಂ ಕಾಪರ್ ಹೈಡ್ರಾಕ್ಸೈಡ್ ಅಥವಾ 1 ಗ್ರಾಂ ಕ್ಯಾಪ್ಟಾನ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.
ಇನ್ನಿತರ ಶಿಲೀಂದ್ರ ರೋಗಗಳ ಹತೋಟಿಗಾಗಿ 1.50 ಗ್ರಾಂ ಗ್ರಾಂಥಯೋಫಿನೈಟ್ ಮಿಥೈಲ್ ಅಥವಾ ಕ್ಲೋರೋಥಲೋನಿಲ್ 2 ಗ್ರಾಂ/ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ದುಂಡಾಣು ನಾಶಕಗಳ ಸಿಂಪಡಣೆಯಾದ 4 ದಿನಗಳ ಬಳಿಕ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಲಘು ಪೋಷಕಾಂಸಗಳ ಸಿಂಪಡಣೆ ಮಾಡಬೇಕು. ಮೋಡ ಕವಿದ ವಾತಾವರಣ ಮುಂದುವರೆದಲ್ಲಿ ದುಂಡಣು ರಕ್ಷಕ 5 ಗ್ರಾಂ ಅಥವಾ 3.5 ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಣೆ ಮಾಡಬೇಕು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

Your email address will not be published.