whatsapp facebooktwitter

ರೈತರು ಕೃಷಿ ಪರಿಕರಗಳನ್ನು ಖರೀದಿಸುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ

ರೈತರು ಕೃಷಿ ಪರಿಕರಗಳನ್ನು ಖರೀದಿಸುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ

11-08-2020 05:59 PM

ವಿಜಯಪುರ ಆಗಸ್ಟ್ ೧೧: ಜಿಲ್ಲೆಯ ರೈತರು ಕೃಷಿ ಪರಿಕರಗಳಾದ ಬೀಜ, ರಸಗೊಬ್ಬರ, ಕೀಟನಾಶಕ, ಜೈವಿಕಗೊಬ್ಬರ, ಸಾವಯವ ಗೊಬ್ಬರಗಳನ್ನು ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು ಎಂದು ವಿಜಯಪುರ, ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಸಹಾಯಕ ಕೃಷಿ ನಿರ್ದೇಶಕರಾದ (ಜಾರಿ ದಳ-೧) ಎ.ಪಿ ಬಿರಾದಾರ ಅವರು ತಿಳಿಸಿದ್ದಾರೆ.
ಅದರಂತೆ ಕೃಷಿ ಪರಿಕರಗಳನ್ನು ಖರೀದಿಸಿದ ನಂತರ ಕಡ್ಡಾಯವಾಗಿ ಅಧಿಕೃತ ರಸೀದಿಯನ್ನು ಕೇಳಿ ಪಡೆಯಬೇಕು. ರಸೀದಿಯಲ್ಲಿ ಬ್ಯಾಚ್ ನಂಬರ್ ಹಾಗೂ ಲಾಟ್ ನಂಬರ್ ನಮೂದಿಸಿರಬೇಕು. ರಸೀದಿಯಲ್ಲಿ ರೈತರ ಸಹಿ ಹಾಗೂ ಮಾರಾಟಗಾರರ ಸಹಿ ಇರಬೇಕು.
ಬಿತ್ತನೆ ಬೀಜಕ್ಕೆ ಸಂಬAಧಪಟ್ಟAತೆ ಬಿತ್ತನೆ ಬೀಜದ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸವನ್ನು ಗಮನಿಸಬೇಕು. ಚೀಲದ ಮೇಲೆ ನಮೂದಿಸಿದಂತೆ ತೂಕ ಸರಿಯಾಗಿದೆಯೇ? ಚೀಲವನ್ನು ಮಶೀನಿನಿಂದ ಹೊಲೆಯಲಾಗಿದೆಯೇ? ಎಂದು ಗಮನಿಸಬೇಕು.
ಬಿತ್ತನೆಗೆ ಮುಂಚೆ ಬೀಜ ಮೊಳೆಯುವಿಕೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು. ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬೀಜ, ದೃಢೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗುಗಳನ್ನು ಬೆಳೆ ಕಟಾವು

Advertise
Advertise

ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು. ನಮೂದಿಸಿದ ಉತ್ಪಾದನಾ ದಿನಾಂಕ ಹಾಗೂವ್ಯಾಲಿಡಿಟಿ (ಬಳಕೆ ಮಾಡುವ ಅವಧಿ) ಅವಧಿಯನ್ನು ಗಮನಿಸಬೇಕು.
ರಸಗೊಬ್ಬರಗಳಿಗೆ ಸಂಬAಧಪಟ್ಟAತೆ ರಸಗೊಬ್ಬರ ಚೀಲದ ಮೇಲೆ ನಮೂದಿಸಿದ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು. ರಸಗೊಬ್ಬರ ಚೀಲದ ಬಾಯಿಯನ್ನು ಯಂತ್ರದಿAದ ಹೊಲೆದಿರಬೇಕು. ರಸಗೊಬ್ಬರ ಚೀಲದ ಮೇಲೆ ರಸಗೊಬ್ಬರ ಯಾವುದೆಂದು ಮುದ್ರಿತವಾಗಿರಬೇಕು. ರಸಗೊಬ್ಬರದ ಹೆಸರು, ಬ್ರಾö್ಯಂಡ್, ತಯಾರಕರ ಹೆಸರು ಹಾಗೂ ವಿಳಾಸ, ಶೇಕಡಾವಾರು ಪೋಷಕಾಂಶಗಳ ವಿವರ, ಗರಿಷ್ಠ ಮತ್ತು ನಿವ್ವಳ ತೂಕ, ಗರಿಷ್ಠ ಮಾರಾಟ ಬೆಲೆ, ತಯಾರಿಸಿದ ತಿಂಗಳು ಮತ್ತು ವರ್ಷದ ಮಾಹಿತಿ ಇರಬೇಕು.
ಕೀಟನಾಶಕಗಳಿಗೆ ಸಂಬAಧಪಟ್ಟAತೆ ಕೀಟನಾಶಕದ ಬಾಟಲಿ/ಪೊಟ್ಟಣ ತೆಗೆದಿರಬಾರದು ಹಾಗೂ ಐಎಸ್‌ಐ ಮಾರ್ಕ್ ಇರಬೇಕು. ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸವಿರಬೇಕು. ಕೀಟನಾಶಕದ ತಾಂತ್ರಿಕ ಹೆಸರು/ಮಾರಾಟದ ಹೆಸರು ಹಾಗೂ ಪ್ರಮಾಣವನ್ನು ನಮೂದಿಸಿರಬೇಕು. ಉತ್ಪಾದನಾ ಹಾಗೂ ಅವಧಿ ಮೀರುವ ದಿನಾಂಕವನ್ನು ನಮೂದಿಸಿರಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಖಾನಾಪೂರ: ಮೈಲಾರ ಮಲ್ಲಣ್ಣಾ‌ ಪಲ್ಲಕ್ಕಿ ಉತ್ಸವ; ಈಶ್ವರ್ ಖಂಡ್ರೆ, ಬಂಡೆಪ್ಪ ಖಾಶೆಂಪುರ್ ಭಾಗಿ

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರದ ಮೈಲಾರ ಮಲ್ಲಣ್ಣಾ (ಬಂಡೋಬಾ) ಪಲ್ಲಕ್ಕಿ ಉತ್ಸವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರು, ಭಾಲ್ಕಿ...

Read More

27-10-2020 10:24 PM

ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

ಗದಗ ಅ.27 : `ಅಕ್ಟೋಬರ್ 28 ರಂದು ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರ ಚುನಾವಣೆಯ ಮತದಾನ ನಡೆಯಲಿದ್ದು, ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು...

Read More

27-10-2020 10:09 PM

ಮತದಾನಕ್ಕೆ ಅಡ್ಡಿಪಡಿಸದಂತೆ ಸೂಚನೆ

ಗದಗ ಅ.27 : ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ ದ್ವೆöÊ-ವಾರ್ಷಿಕ ಚುನವಾಣೆಯ ಮತದಾನವು ಅಕ್ಟೋಬರ್ 28 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನದಂದು...

Read More

27-10-2020 10:06 PM

ಅ.31 ರಂದು ಮಹರ್ಷಿ ವಾಲ್ಮೀಕಿ ಜಯಂತಿ

ಗದಗ ಅ.27 : ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 31 ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಹರ್ಷಿ...

Read More

27-10-2020 10:05 PM

ಅ.28 ರಂದು ನರಗುಂದ ಪಟ್ಟಣದ ಸಂತೆ ರದ್ದು

ಗದಗ ಅ.27 : ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ದ್ವೆöÊ-ವಾರ್ಷಿಕ ಚುನಾವಣೆ-2020 ರ ಮತದಾನವು ಬುಧವಾರದಂದು (ಅಕ್ಟೋಬರ್ 28) ಜರುಗಲಿರುವ ಹಿನ್ನೆಲೆಯಲ್ಲಿ...

Read More

27-10-2020 10:04 PM

Read More
×E-Paperಸಾಹಿತ್ಯGeneralVideos