whatsapp facebooktwitter

ಸುಕೋ ಬ್ಯಾಂಕ್‌ನಿ0ದ ‘ವಿದ್ಯಾ ಸೇತು’ ಸಾಲ ಯೋಜನೆ ಜಾರಿ

ಸುಕೋ ಬ್ಯಾಂಕ್‌ನಿ0ದ ‘ವಿದ್ಯಾ ಸೇತು’ ಸಾಲ ಯೋಜನೆ ಜಾರಿ

11-08-2020 09:36 PM

ಕೊಪ್ಪಳ ೧೧: ಕೋವಿಡ್-೧೯ ನಿಂದಾಗಿ ಬದಲಾದ ಕ್ಲಾಸ್‌ರೂಮ್ ಬೋಧನಾ ಮತ್ತು ಕಲಿಕಾ ಪದ್ಧತಿಯಲ್ಲಿ ಆನ್‌ಲೈನ್ ಶಿಕ್ಷಣ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಲ್ಯಾಪಟಾಪ್ ಖರೀದಿಸಲು ಸುಕೋ ಬ್ಯಾಂಕಿನಿAದ "ವಿದ್ಯಾ-ಸೇತು ಸಾಲ" ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಸುಕೋ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಪರಿಮಳಾಚಾರ್ಯ ಅಗ್ನಿಹೋತ್ರಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸುಕೋ ಬ್ಯಾಂಕಿನ ವಿದ್ಯಾ-ಸೇತು ಸಾಲ ಯೋಜನೆಯಲ್ಲಿ ಶೇ.೧೪% ಬಡ್ಡಿ ದರದಲ್ಲಿ ಲ್ಯಾಪಟಾಪ್ ಖರೀದಿಸಲು ಲ್ಯಾಪ್ ಟಾಪ್ ಮೊತ್ತದ ಶೇ ೧೦೦% ರಷ್ಟು ಹಣವನ್ನು ಬ್ಯಾಂಕ್ ಸಾಲವಾಗಿ ನೀಡುತ್ತದೆ. ಸುಕೋ ವಿದ್ಯಾ-ಸೇತು ಸಾಲ ಯೋಜನೆಯು ವಿದ್ಯಾರ್ಥಿಗಳ ಹಾಗು ಪೋಷಕರ ಸ್ನೇಹಿ ಮತ್ತು ಆನ್‌ಲೈನ್ ಕಲಿಕಾ ಪೂರಕ

Advertise
Advertise

ಯೋಜನೆ ಎಂದು ತಿಳಿಸಿದರು.
ಗ್ರಾಹಕರ ಆರ್ಥಿಕ ವ್ಯವಸ್ಥೆಯ ಅನುಕೂಲಕ್ಕೆ ತಕ್ಕಂತೆ ಪ್ರತಿದಿನ, ವಾರಕಕ್ಕೊಮ್ಮೆ ಮತ್ತು ತಿಂಗಳಿಗೊಮ್ಮೆ ಸಾಲದ ಹಣ ಮರು ಪಾವತಿಸುವ ಸುಲಭ ಕಂತುಗಳನ್ನು ಹೊಂದಿರುವ ಯೋಜನೆ ಇದಾಗಿದೆ. ಕನಿಷ್ಟ ಆರು ತಿಂಗಳಿAದ ಎರಡು ವರ್ಷಗಳ ಅವಧಿಯವರೆಗೆ ಸಾಲದ ಹಣ ಮರು ಪಾವತಿ ಮಾಡುವ ಸೌಲಭ್ಯವನ್ನು ಈ ಯೋಜನೆ ಹೊಂದಿದೆ. ವಿದ್ಯಾರ್ಥಿಗಳು-ಪೋಷಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು . ಈ ಯೋಜನೆಯಡಿ ಲ್ಯಾಪಟಾಪ್ ಖರೀದಿಸುವ ವಿದ್ಯಾರ್ಥಿಗೆ ಮೈಕ್ ಸಮೇತ ಹೆಡ್‌ಫೋನ್ ಅನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸುಕೋ ಬ್ಯಾಂಕ್ ಕೊಪ್ಪಳ ಶಾಖೆಗೆ ಭೇಟಿ ನೀಡಬಹುದು ಅಥವಾ ೧೮೦೦೧೨೩೫೫೬೦ - ೧೮೦೦೧೨೧೫೫೬೦ ಗೆ ಕರೆ ಮಾಡಿ ಮಾಹಿತಿ ಪಡೆಯಲು ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಖಾನಾಪೂರ: ಮೈಲಾರ ಮಲ್ಲಣ್ಣಾ‌ ಪಲ್ಲಕ್ಕಿ ಉತ್ಸವ; ಈಶ್ವರ್ ಖಂಡ್ರೆ, ಬಂಡೆಪ್ಪ ಖಾಶೆಂಪುರ್ ಭಾಗಿ

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರದ ಮೈಲಾರ ಮಲ್ಲಣ್ಣಾ (ಬಂಡೋಬಾ) ಪಲ್ಲಕ್ಕಿ ಉತ್ಸವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರು, ಭಾಲ್ಕಿ...

Read More

27-10-2020 10:24 PM

ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

ಗದಗ ಅ.27 : `ಅಕ್ಟೋಬರ್ 28 ರಂದು ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರ ಚುನಾವಣೆಯ ಮತದಾನ ನಡೆಯಲಿದ್ದು, ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು...

Read More

27-10-2020 10:09 PM

ಮತದಾನಕ್ಕೆ ಅಡ್ಡಿಪಡಿಸದಂತೆ ಸೂಚನೆ

ಗದಗ ಅ.27 : ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ ದ್ವೆöÊ-ವಾರ್ಷಿಕ ಚುನವಾಣೆಯ ಮತದಾನವು ಅಕ್ಟೋಬರ್ 28 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನದಂದು...

Read More

27-10-2020 10:06 PM

ಅ.31 ರಂದು ಮಹರ್ಷಿ ವಾಲ್ಮೀಕಿ ಜಯಂತಿ

ಗದಗ ಅ.27 : ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 31 ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಹರ್ಷಿ...

Read More

27-10-2020 10:05 PM

ಅ.28 ರಂದು ನರಗುಂದ ಪಟ್ಟಣದ ಸಂತೆ ರದ್ದು

ಗದಗ ಅ.27 : ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ದ್ವೆöÊ-ವಾರ್ಷಿಕ ಚುನಾವಣೆ-2020 ರ ಮತದಾನವು ಬುಧವಾರದಂದು (ಅಕ್ಟೋಬರ್ 28) ಜರುಗಲಿರುವ ಹಿನ್ನೆಲೆಯಲ್ಲಿ...

Read More

27-10-2020 10:04 PM

Read More
×E-Paperಸಾಹಿತ್ಯGeneralVideos